ಗದಗ: ಇಲ್ಲಿನ ಕೆ.ಹೆಚ್.ಪಾಟೀಲ್ ಪ್ರತಿಷ್ಠಾನ ಮತ್ತು ರಾಮಚಂದ್ರ ಲವ್ & ಕೇರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು 61 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಗದಗ ಕೋ ಆಪರೇಟಿವ್ ಆಫ್ ರಿಯಲ್ ಎಸ್ಟೇಟ್ ಇಂಡಸ್ಟ್ರಿಯವರ ಜಾಗದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಕೋವಿಡ್ ಕೇರ್ ಸೆಂಟರ್ ನಡೆಸಲು ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.
ಬಡವರಿಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್ ಕಾರ್ಡುದಾರರಿಗೆ ರೆಮ್ಡಿಸಿವಿರ್ ಔಷಧ ಹೊರತುಪಡಿಸಿ, ಉಳಿದ ಎಲ್ಲಾ ಔಷಧ ಉಚಿತವಾಗಿದೆ. ಬೆಡ್ ಚಾರ್ಜ್ ಇನ್ನಿತರ ಸೌಲಭ್ಯಗಳಿಗೆ ರೋಗಿಗಳಿಂದ ವೆಚ್ಚ ಭರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಓದಿ : ಹಳ್ಳಿಗಳೇ ಇದೀಗ ಕೊರೊನಾ ಹಾಟ್ಸ್ಪಾಟ್... ಒಂದೇ ಊರಲ್ಲಿ 10 ದಿನದಲ್ಲಿ 11 ಸಾವು
ಸರ್ಕಾರದ ನಿಯಮದಂತೆ ಒಬ್ಬ ರೋಗಿಗೆ ಸುಮಾರು 10 ರಿಂದ 15 ಸಾವಿರ ರೂ.ವರೆಗೆ ಇಲ್ಲಿ ಚಾರ್ಜ್ ಮಾಡಲಾಗುತ್ತದೆ. ಸರಾಸರಿ 12 ಸಾವಿರದವರೆಗೆ ಬಿಲ್ ಮಾಡಲಾಗುತ್ತದೆ ಎಂದರು.