ETV Bharat / state

ಜೀವ ಹಿಂಡುತ್ತಿವೆ ಜಿಂಕೆಗಳು, ಗದಗ ರೈತರ ಗೋಳು ಕೇಳೋರೇ ಇಲ್ಲ..

ಒಂದು ಕಡೆ ಜಿಲ್ಲೆಯಲ್ಲಿ ಮಳೆ ಇಲ್ಲ ಅಂತ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅದರಲ್ಲೇ ಕೆಲ ರೈತರು ಇದ್ದ ಅಲ್ಪ ಸ್ವಲ್ಪ ನೀರಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಆದ್ರೆ ಜಿಲ್ಲೆಯಲ್ಲಿ ಜಿಂಕೆಗಳ ಚಿನ್ನಾಟಕ್ಕೆ ಸಂಪೂರ್ಣ ಹೆಸರು ಬೆಳೆ ನಾಶವಾಗಿದ್ದು, ರೈತರು ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

author img

By

Published : Jun 23, 2019, 6:29 PM IST

ಗದಗ

ಗದಗ: ಒಂದು ಕಡೆ ಜಿಲ್ಲೆಯಲ್ಲಿ ಮಳೆ ಇಲ್ಲ ಅಂತ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಕೆಲ ರೈತರು ಇದ್ದ ಅಲ್ಪಸ್ವಲ್ಪ ನೀರಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಆದ್ರೆ, ಜಿಲ್ಲೆಯಲ್ಲಿ ಜಿಂಕೆಗಳ ಚಿನ್ನಾಟಕ್ಕೆ ಸಂಪೂರ್ಣ ಹೆಸರುಬೆಳೆ ನಾಶವಾಗಿದ್ದು, ರೈತರು ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರ ಬೆಳನಾಶ ಮಾಡುತ್ತಿವೆ ಜಿಂಕೆಗಳು

ಗದಗ, ಮುಂಡರಗಿ, ಶಿರಹಟ್ಟಿ, ರೋಣ ತಾಲೂಕುಗಳಲ್ಲಿ ಜಿಂಕೆಕಾಟ ಹೆಚ್ಚಾಗಿದ್ದು, ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ಸಾಕಷ್ಟು ದೂರು ನೀಡಿದ್ದಾರೆ. ಆದ್ರೆ, ಯಾವೊಬ್ಬ ಅಧಿಕಾರಿಯೂ ಜಿಂಕೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಮಾರನಬಸರಿ, ಜಕ್ಕಲಿ, ಲಿಂಗದಾಳ, ಹಳ್ಳಿಗುಡಿ, ಹರ್ಲಾಪೂರ, ಕಣಗಿನಾಳ, ರಂಬಾಪುರ , ಯಾವಗಲ್​, ಅಸೂಟಿ, ಕರಮುಡಿ, ಮಾಳವಾಡ, ಶಿಗ್ಲಿ ಸೇರಿದಂತೆ ಕಪ್ಪತಗುಡ್ಡ, ಮಲಪ್ರಭಾ ನದಿ ದಂಡೆಯ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿ ಹೇಳತೀರದಾಗಿದೆ.

ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಜಿಂಕೆಗಳು ಓಡಾಡುತ್ತಿದ್ದು, ಬೆಳೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತಿವೆ. ಇದರಿಂದ ರೈತ ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದೇ ದುಸ್ತರವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಪ್ರತಿ ವರ್ಷವೂ ರೈತರ ಕೈ ಸೇರುತ್ತಿಲ್ಲ. ಇದರಿಂದ ರೈತರು ಹೈರಾಣಾಗಿದ್ದು, ಜಿಲ್ಲೆಯಲ್ಲಿ ಸಾವಿರಾರು ರೈತರು ಪ್ರತಿ ವರ್ಷವೂ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

Intro:ಜಿಂಕೆ ಹಾವಳಿಗೆ ಬೇಸತ್ತ ಅನ್ನದಾತ..

ಆಂಕರ್: ಮಳೆ ಇಲ್ಲ ಅಂತ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅದರಲ್ಲೇ ಕೆಲ ರೈತರು ಇದ್ದ ಅಲ್ಪ ಸ್ವಲ್ಪ ನೀರಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ ಆದ್ರೆ ಜಿಂಕೆಗಳ ಚಿನ್ನಾಟಕ್ಕೆ ಸಂಪೂರ್ಣ ಹೆಸರು ಬೆಳೆ ನಾಶವಾಗಿದೆ. ಇದು ಜಿಂಕೆಗಳಿಗೆ ಚೆಲ್ಲಾಟವಾದ್ರೆ, ರೈತರಿಗೆ ಪ್ರಾಣ ಸಂಕಟ ಎದುರಾಗಿದೆ.

ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ, ರೋಣ ತಾಲೂಕುಗಳಲ್ಲಿ ಜಿಂಕೆ ಕಾಟ ಹೆಚ್ಚಾಗಿದೆ. ಜಿಂಕೆ ಹಾವಳಿ ಬಗ್ಗೆ ರೈತರು ಅರಣ್ಯ ಇಲಾಖೆ ಸಾಕಷ್ಟು ಬಾರಿ ದೂರು ನೀಡಿದ್ರು ಯಾವೊಬ್ಬ ಅಧಿಕಾರಿಗಳು ಜಿಂಕೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಮಾರನಬಸರಿ, ಜಕ್ಕಲಿ, ಲಿಂಗದಾಳ, ಹಳ್ಳಿಗುಡಿ, ಹರ್ಲಾಪೂರ, ಕಣಗಿನಾಳ, ರಂಬಾಪೂರ , ಯಾವಗಲ್ಲ, ಅಸೂಟಿ, ಕರಮುಡಿ, ಮಾಳವಾಡ, ಶಿಗ್ಲಿ ಸೇರಿದಂತೆ ಕಪ್ಪತಗುಡ್ಡ, ಮಲಪ್ರಭಾ ನದಿ ದಂಡೆಯಲ್ಲಿರುವ ಗ್ರಾಮಗಳಿಗೆ ಜಿಂಕೆಗಳ ಹಾವಳಿ ಅತ್ಯಂತ ಪ್ರಮುಖವಾಗಿದೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಜಿಂಕೆಗಳು ಸಂಚರಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಜಿಂಕೆಗಳು ಬೆಳೆಗಳು ಹುಟ್ಟಿದ ಮೇಲೆ ಬರುತ್ತಿದ್ದಂತೆ ಅವುಗಳನ್ನು ಸಂಪೂರ್ಣ ತಿಂದು ಹಾಕುತ್ತಿವೆ. ಇದರಿಂದ ರೈತ ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದೇ ದುಸ್ತರವಾಗಿದೆ, ಪದೇ ಪದೇ ಬಿತ್ತನೆ ಮಾಡಲು ಸಾಧ್ಯವೇ ಇಲ್ಲ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಪ್ರತಿ ವರ್ಷವೂ ರೈತರ ಕೈ ಸೇರುತ್ತಿಲ್ಲ. ಇದರಿಂದ ಕಂಗಾಲಾಗಿದ್ದಾನೆ ಭೀಕರ ಬರ ಒಂದೆಡೆ ರೈತರನ್ನು ಹೈರಾಣ ಮಾಡಿದ್ರೆ. ಮತ್ತೊಂಡೆ ಜಿಂಕೆಗಳು ರೈತರ ಜೀವ ಹಿಂಡುತ್ತಿವೆ. ಗದಗ ಜಿಲ್ಲೆಯಲ್ಲಿ ಸಾವಿರಾರು ರೈತರು ಪ್ರತಿ ವರ್ಷವೂ ಅಪಾರ ಹಾನಿ ಅನುಭವಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಂಭೀರವಾದ ಚಿಂತನೆ ನಡೆಸಬೇಕಿದೆ. ಈ ವರದಿ ನಂತರ ನಾದ್ರು ಸರ್ಕಾರ ಎಚ್ಚೆತ್ತಗೊಂಡು ಜಿಂಕೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುತ್ತಾ ಅನ್ನೋದು ಕಾದನೋಡಬೇಕು..

ಬೈಟ್-1 : ಮಲ್ಲೇಶಪ್ಪ, ಬೆಳೆ ಕಳೆದುಕೊಂಡ ರೈತ.Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.