ETV Bharat / bharat

ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲು ಕೇಜ್ರಿವಾಲ್​ ಭೇಟಿಯಾಗಲಿರುವ ಹೇಮಂತ್​ ಸೊರೆನ್​: 28ಕ್ಕೆ ಪ್ರಮಾಣ - JMM LEADER

ಜಾರ್ಖಂಡ್​ನ ಹೊಸ ಸಿಎಂ ಆಗಿ ಹೇಮಂತ್​ ಸೊರೆನ್​ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭಕ್ಕೆ ಅರವಿಂದ್​​ ಕೇಜ್ರಿವಾಲ್​​ರನ್ನು ಆಹ್ವಾನಿಸಲಿದ್ದಾರೆ. ನವೆಂಬರ್​ 28ಕ್ಕೆ ಸೊರೆನ್​​​​ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕೇಜ್ರಿವಾಲ್​ ಭೇಟಿಯಾಗಲಿರುವ ಹೇಮಂತ್​ ಸೊರೆನ್​
ಕೇಜ್ರಿವಾಲ್​ ಭೇಟಿಯಾಗಲಿರುವ ಹೇಮಂತ್​ ಸೊರೆನ್​ (ETV Bharat)
author img

By ETV Bharat Karnataka Team

Published : Nov 26, 2024, 3:37 PM IST

ನವದೆಹಲಿ: ಇತ್ತೀಚಗೆ ಮುಗಿದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಅವರು ಇಂದು (ಮಂಗಳವಾರ) ಆಮ್ ಆದ್ಮಿ ಪಕ್ಷದ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ.

ಚುನಾವಣಾ ಗೆಲುವಿನ ನಂತರ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವ ಹೇಮಂತ್ ಸೊರೆನ್ ಅವರು ನವೆಂಬರ್​ 28 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸಲಿದ್ದಾರೆ. ಉಭಯ ನಾಯಕರ ನಡುವಿನ ಈ ಸಭೆ ಸಂಜೆ 7 ಗಂಟೆಗೆ ನಿಗದಿಯಾಗಿದೆ.

ಜೈಲಲ್ಲಿ ಕೇಜ್ರಿವಾಲ್ ​​- ಸೊರೆನ್​ ಒಡನಾಟ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್​ ಸಿಎಂ ಆಗಿದ್ದ ಹೇಮಂತ್​ ಸೊರೆನ್​, ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರು ದೆಹಲಿಯ ತಿಹಾರ್​ ಜೈಲು ಸೇರಿದ್ದರು. ಇಬ್ಬರು ನಾಯಕರ ಮಧ್ಯೆ ಜೈಲಿನಲ್ಲಿ ಪರಸ್ಪರ ಒಡನಾಟ ಬೆಳೆದಿತ್ತು. ಈ ವೇಳೆ, ಕೇಜ್ರಿವಾಲ್​ ಅವರ ಪತ್ನಿ, ಸೊರೆನ್​ ಅವರ ಪತ್ನಿ ದೆಹಲಿಯಲ್ಲಿ ಭೇಟಿ ಮಾಡಿದ್ದರು. ಇದಾದ ಬಳಿಕ ಎರಡೂ ಕುಟುಂಬಗಳ ನಡುವೆ ಮತ್ತಷ್ಟು ಬಾಂಧವ್ಯ ಹೆಚ್ಚಿಸಿತ್ತು.

ಹೇಮಂತ್ ಸೊರೇನ್ ಅವರು ಜಾಮೀನಿನ ಮೇಲೆ ಹೊರಬಂದು ಮತ್ತೆ ಮುಖ್ಯಮಂತ್ರಿಯಾದಾಗ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರನ್ನು ಭೇಟಿ ಮಾಡಿದ್ದರು. ಆಗ ಕೇಜ್ರಿವಾಲ್ ಜೈಲಿನಲ್ಲಿದ್ದರು. ಸೋರೆನ್ ಮತ್ತು ಅವರ ಪತ್ನಿ ಕಲ್ಪನಾ ಅವರನ್ನು ಸುನೀತಾ ಕೇಜ್ರಿವಾಲ್ ಅವರು ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ವೇಳೆ, ಹೇಮಂತ್ ಸೋರೆನ್ ಮತ್ತು ಸುನೀತಾ ಕೇಜ್ರಿವಾಲ್ ನಡುವೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದ್ದವು.

ಜಾರ್ಖಂಡ್​ನಲ್ಲಿ ಸುನಿತಾ ಪ್ರಚಾರ: ಇದಕ್ಕೂ ಮೊದಲು, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕನನ್ನು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಹಾಕಿದಾಗ, ಕೇಜ್ರಿವಾಲ್​ ಅವರು ಸೊರೆನ್​ ಪತ್ನಿ ಕಲ್ಪನಾ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದರು.

ಲೋಕಸಭೆ ಚುನಾವಣೆಯ ವೇಳೆ ಸುನಿತಾ ಕೇಜ್ರಿವಾಲ್ ಅವರು ರಾಂಚಿಯಲ್ಲಿ ಇಂಡಿಯಾ ಕೂಟವು ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೇಮಂತ್ ಸೊರೆನ್ ಅವರ ಪತ್ನಿಯನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಹುದ್ದೆಗೆ ಏಕನಾಥ್​ ಶಿಂಧೆ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.