ETV Bharat / state

ಸಿದ್ದಾಪುರದಲ್ಲಿ 8 ವರ್ಷದ ಹಿಂದೆ ಕೊಲೆ; ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ - MURDER CASE ACCUSED ARREST

ಸಿದ್ದಾಪುರದಲ್ಲಿ 8 ವರ್ಷದ ಹಿಂದೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

Accused Bharat Singh
ಆರೋಪಿ ಭರತ್ ಸಿಂಗ್ (ETV Bharat)
author img

By ETV Bharat Karnataka Team

Published : Nov 26, 2024, 3:16 PM IST

ಕಾರವಾರ (ಉತ್ತರ ಕನ್ನಡ) : ಸಿದ್ದಾಪುರ ತಾಲೂಕಿನ ಹಾಲ್ಕಣಿ ಎಂಬಲ್ಲಿ ಕಳೆದ 8 ವರ್ಷದ ಹಿಂದೆ ವ್ಯಕ್ತಿಯೊಬ್ಬನ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಉತ್ತರಾಖಂಡ ಮೂಲದ ಕೊಲೆ ಆರೋಪಿಯನ್ನ ಸಿದ್ದಾಪುರ ಪೊಲೀಸರು ಬಂಧಿಸಿ, ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

2016 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಲ್ಕಣಿ ಎಂಬಲ್ಲಿ ಶರತ್ ಗಣೇಶ ಆಚಾರಿ ಎಂಬುವವರನ್ನ ಭರತ್ ಸಿಂಗ್ ಹಾಗೂ ದಿಲ್ ರಾಜ್ ಸೇರಿ ಕೊಲೆ ಮಾಡಿದ್ದರು. ಬಳಿಕ ದಿಲ್ ರಾಜ್ ಎಂಬಾತನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪ್ರಮುಖ ಆರೋಪಿಯಾಗಿದ್ದ ಭರತ್ ಸಿಂಗ್ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಗಣೇಶ ಕೆ. ಎಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಜೆ. ಬಿ ಸೀತಾರಾಮ, ಪಿಎಸ್ಐ ಅನಿಲ್, ಸಿಬ್ಬಂದಿ ರಾಜು ಎಂ, ವಿನ್ಸನ್ ಫರ್ನಾಂಡೀಸ್ ಒಳಗೊಂಡ ತಂಡ ಆರೋಪಿ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.