ETV Bharat / state

ಅಂತರ್ಜಾತಿ ವಿವಾಹಕ್ಕೆ ವಿರೋಧ: ಗದಗ ಜಿಲ್ಲೆಯಲ್ಲಿ ದಂಪತಿಯ ಬರ್ಬರ ಕೊಲೆ! - ಗದಗ ದಂಪತಿ ಕೊಲೆ

ಗದಗ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದ ದಂಪತಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ವಿರೋಧ
author img

By

Published : Nov 6, 2019, 7:01 PM IST

ಗದಗ: ಅಂತರ್ಜಾತಿ ವಿವಾಹವಾಗಿದ್ದನ್ನು ವಿರೋಧಿಸಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಹೇಯ ಕೃತ್ಯ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಅಂತರ್ಜಾತಿ ವಿವಾಹವಾಗಿದ್ದ ದಂಪತಿಯ ಬರ್ಬರ ಕೊಲೆ

ಲಕ್ಕಲಕಟ್ಟಿ ಗ್ರಾಮದ ರಮೇಶ್ ಮಾದಾರ (29) ಹಾಗೂ ಗಂಗಮ್ಮ(23) ಎಂಬ ದಂಪತಿ ಕೊಲೆಗೀಡಾದವರು. ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ದಂಪತಿಯನ್ನು ಕೊಲೆ ಮಾಡಲಾಗಿದೆ. ಗಂಗಮ್ಮಳ ಸಹೋದರರಾದ ಶಿವಪ್ಪ, ರವಿ ಹಾಗೂ ರಮೇಶ ರಾಥೋಡ್ ಎಂಬುವರು ಈ ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ.

ಈಗಾಗಲೇ‌ ಶಿವಪ್ಪ ಮತ್ತು ರವಿ ಎಂಬುವರನ್ನ ಬಂಧಿಸಿರುವ ಪೊಲೀಸರು ಪರಾರಿಯಾಗಿರುವ ರಮೇಶ್​ ರಾಥೋಡ ಬಂಧನಕ್ಕೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ನಾಗರಿಕ ಸಮಾಜದಲ್ಲಿಯೇ ಅಂತರ್ಜಾತಿ ವಿವಾಹವಾಗಿದಕ್ಕೆ, ದಂಪತಿಗಳಿಬ್ಬರ ಜೋಡಿ ಕೊಲೆ...

ಆ್ಯಂಕರ- ಅಂತರ್ಜಾತಿ ವಿವಾಹವಾಗಿದ್ದನ್ನು ವಿರೋಧಿಸಿ ದಂಪತಿಗಳಿಬ್ಬರನ್ನು ಬರ್ಭರವಾಗಿ ಕೊಲೆ ಮಾಡಿರೋ ಘಟನೆ ಗದಗ‌ ಜಿಲ್ಲೆಯಲ್ಲಿ ನಡೆದಿದೆ. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ರಮೇಶ್ ಮಾದಾರ (೨೯) ಹಾಗೂ ಗಂಗಮ್ಮ(೨೩) ಅನ್ನೋ ದಂಪತಿಗಳು ಮೃತ ದುರ್ದೈವಿಗಳು ಕೊಲೆಯಾಗಿದ್ದು ಬಡಿಗೆ ಮತ್ತು ಕಲ್ಲಿನಿಂದ ಹೊಡೆದು ಗಂಡ ಹೆಂಡತಿಗಳಿಬ್ಬರ ಕೊಲೆ ಮಾಡಿದ್ದಾರೆ.ಗಂಗಮ್ಮಳ ಸಹೋದರರಾದ ಶಿವಪ್ಪ, ರವಿ ಹಾಗೂ ರಮೇಶ ರಾಥೋಡ್ ಅನ್ನೋರು ಕೊಲೆ‌ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈಗಾಗಲೇ‌ ಶಿವಪ್ಪ ಮತ್ತು ರವಿ ಅನ್ನೋರನ್ನು ಬಂಧಿಸಿರೋ ಪೊಲಿಸರು ಪರಾರಿಯಾಗಿರೋ ರಮೇಶ ರಾಥೋಡ ಅನ್ನುವವನಿಗಾಗಿ ಹುಡುಕಾಡ ನಡೆಸಿದ್ದಾರೆ.
ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.