ಗದಗ: ಕಾಂಗ್ರೆಸ್ ಮುಖಂಡ ಮತ್ತು ಗದಗ ಶಾಸಕ ಹೆಚ್.ಕೆ. ಪಾಟೀಲ್ ತಾಯಿ ಅನಾರೋಗ್ಯದ ಹಿನ್ನೆಲೆ ಸೋಮವಾರ ವಿಧಿವಶರಾಗಿದ್ದರು. 88 ವರ್ಷದ ಪದ್ಮಾವತಿ ಕೆ. ಪಾಟೀಲ್ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದರು. ಮಂಗಳವಾರ ಹುಲಕೋಟಿ ಗ್ರಾಮದ ಮುಕ್ತಿ ಮಂದಿರದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಇದನ್ನೂ ಓದಿ: ಗದಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಬಂದ್.. ಚಿಕಿತ್ಸೆ ಸಿಗದೇ ಕಿಡ್ನಿ ಫೇಲ್ಯೂರ್ ರೋಗಿಗಳ ನರಳಾಟ
ಇಂದು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಕಾಂಗ್ರೆಸ್ ಮುಖಂಡರು ಆಗಮಿಸಿ, ಅಂತಿಮ ದರ್ಶನ ಪಡೆದುಕೊಂಡರು. ಶಾಸಕ ಎಚ್ ಕೆ ಪಾಟೀಲ್ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಮಾಡಿ, ಅಗ್ನಿ ಸ್ಪರ್ಶ ಮಾಡಿದರು.