ETV Bharat / state

ಶ್ರಾವಣ ಶನಿವಾರವೇ ಹನುಮ ಮೂರ್ತಿ ಕಳ್ಳತನ: ವಿಗ್ರಹ ಕದ್ದೊಯ್ದವರಿಗೆ ದೇವಸ್ಥಾನ ಸಮಿತಿ ಖಡಕ್​ ಎಚ್ಚರಿಕೆ - Hanuman idol theft

ಸೂರಣಗಿ ಗ್ರಾಮದ ಹನುಮ ಮೂರ್ತಿ ಕಳ್ಳತನ ಆಗಿದೆ. ಈ ಹಿನ್ನೆಲೆಯಲ್ಲಿ ಮಾರುತಿ ದೇವಸ್ಥಾನದ ಸಮಿತಿ ಸದಸ್ಯರು ಸೇರಿ ಸಭೆ ಸೇರಿದ್ದು, ಮೂರ್ತಿಯನ್ನು ವಾಪಸ್ ತಂದಿಡದಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡೋದಾಗಿ ಎಚ್ಚರಿಕೆ ನೀಡಿದ್ದಾರೆ.

Hanuman idol theft in gadaga
ಹನುಮ ಮೂರ್ತಿ ಕಳ್ಳತನ
author img

By

Published : Aug 7, 2022, 2:44 PM IST

ಗದಗ: ಶನಿವಾರ ಬೆಳಗಿನ ಜಾವ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಶ್ರಾವಣ ಶನಿವಾರದ ಬೆಳಗಿನ ಪೂಜೆಗೆಂದು ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯ ಹನುಮ ಮೂರ್ತಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾರುತಿ ದೇವಸ್ಥಾನದ ಸಮಿತಿ ಸದಸ್ಯರು ಸೇರಿ ಸಭೆ ಸೇರಿದ್ದು, ಮೂರ್ತಿಯನ್ನು ವಾಪಸ್ ತಂದಿಡದಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ ವಿಡಿಯೋ ಹರಿಬಿಟ್ಟ ಕಮಿಟಿ ಸದಸ್ಯರು, ಐತಿಹಾಸಿಕ ಮೂರ್ತಿಯನ್ನು ಕಳ್ಳತನ ಮಾಡಲಾಗಿದೆ. ಪೂಜೆಗೆ ಬಂದಿರುವ ಭಕ್ತರಿಗೆ ಸ್ವಾಮಿ ವಿಗ್ರಹ ಇಲ್ಲದ್ದನ್ನು ಕಂಡು ಅತೀವ ನೋವಾಗಿದೆ. ವಿಗ್ರಹವನ್ನು ತಂದಿಡಬೇಕು. ಇಲ್ಲವಾದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸೋದಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಹನುಮ ಮೂರ್ತಿ ಕಳ್ಳತನ ಪ್ರಕರಣ

ಇದನ್ನೂ ಓದಿ: ಲೇಟ್ ನೈಟ್ ಪಾರ್ಟಿ: ದಾವಣಗೆರೆಯ ಹೋಟೆಲ್​​ ಮೇಲೆ ಪೊಲೀಸರಿಂದ ದಾಳಿ

ಸೂರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ವರ್ಷದ ಹಿಂದೆ ಹನುಮ ಕಲ್ಲು ರೂಪದಲ್ಲಿ ಉದ್ಭವಿಸಿತ್ತು. ಇತ್ತೀಚೆಗೆ ಈ ಮೂರ್ತಿಗೆ ರೂಪ ನೀಡಲಾಗಿತ್ತು. ಇಲ್ಲಿಗೆ ಸುತ್ತಮುತ್ತಲಿನ ಭಕ್ತರು ಆಗಮಿಸುತ್ತಿದ್ದರು. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಗ್ರಹ ನಾಪತ್ತೆಯಾದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.