ETV Bharat / state

ಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯಿಂದ ವಿವಿಧ ಕಾರ್ಯಕ್ರಮಗಳು - Jyotirlinga darshan

ಶಿವರಾತ್ರಿ ಪ್ರಯುಕ್ತ ಫೆ.20 ರಿಂದ 23ರವರೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

Prajapati Brahmakumari Ishwarya University
ಬ್ರಹ್ಮಕುಮಾರಿ ಜಯಂತಿ ಅಕ್ಕ, ಸಂಚಾಲಕಿ
author img

By

Published : Feb 17, 2020, 4:55 PM IST

ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವರಾತ್ರಿ ಹಬ್ಬದಂದು 84 ನೇ ಜ್ಯೋತಿರ್ಲಿಂಗ ದರ್ಶನ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಬ್ರಹ್ಮಕುಮಾರಿ ಜಯಂತಿ ಅಕ್ಕ, ಸಂಚಾಲಕಿ

ಈ ಕುರಿತು ಸಂಸ್ಥೆಯ ಸಂಚಾಲಕಿ ಬ್ರಹ್ಮಕುಮಾರಿ ಜಯಂತಿ ಅಕ್ಕ ಮಾತನಾಡಿ, ಫೆ.20 ರ ಗುರುವಾರ ಸಂಜೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಫೆ.21 ಶುಕ್ರವಾರ ಸಂಜೆ ಶಿವರಾತ್ರಿಯ ಆಧ್ಯಾತ್ಮ ಸತ್ಯತೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ಉಪನ್ಯಾಸ ಹಾಗೂ ಮಹಾ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಹಳಿಯಾಳದ ಹೊಂಗಿರಣ ತಂಡದವರಿಂದ ಸರ್ವ ಧರ್ಮದ ಭಗವಂತ ಒಬ್ಬನೇ ಎಂಬ ಗೊಂಬೆಯಾಟ. ಬಳಿಕ ಮೌಲ್ಯ ಜಾಗೃತಿಯ ಕಿರು ನಾಟಕಗಳು ಹಾಗೂ ಶಾಲಾ‌ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.

ಫೆ. 22 ರ ಶನಿವಾರ ಸಂಜೆ ಆತ್ಮ ಸಾಕ್ಷಾತ್ಕಾರ ಮಹೋತ್ಸವ ಕಾರ್ಯಕ್ರಮ ಹಾಗೂ 23ರ ಭಾನುವಾರ ಪರಮಾತ್ಮ ಸಾಕ್ಷತ್ಕಾರ ಮಹೋತ್ಸವ ಜರಗಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.