ETV Bharat / state

ಗದಗ - ಬೆಟಗೇರಿ ಅವಳಿ ನಗರಕ್ಕೆ ಖತರ್ನಾಕ್ ಗ್ಯಾಂಗ್ ಎಂಟ್ರಿ.. ಶ್ರೀಮಂತರ ನಿದ್ದೆ ಕದ್ದ ಖದೀಮರು!

ಗದಗದ ಮನೆಯೊಂದರಲ್ಲಿ ಕಳ್ಳರು ಸುಮಾರು ಒಂದು ಕೆ.ಜಿಯಷ್ಟು ಚಿನ್ನಾಭರಣ ಲೂಟಿ ಮಾಡಿದ್ದು, ಸಂಜೆ 6.30ರಿಂದ 8 ಗಂಟೆ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ. ಇದರಿಂದ ಗದಗ - ಬೆಟಗೇರಿ ಅವಳಿ ನಗರಗಳ ಜನರು ಬೆಚ್ಚಿಬಿದ್ದಿದ್ದಾರೆ. ಊರ ಮಧ್ಯದಲ್ಲಿರುವ ಮನೆಯಲ್ಲೇ ಕಳ್ಳತನ ನಡೆದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

gold-jewelry-theft-in-gadaga-betageri
ಗದಗ-ಬೆಟಗೇರಿ ಅವಳಿ ನಗರಕ್ಕೆ ಖತರ್ನಾಕ್ ಗ್ಯಾಂಗ್ ಎಂಟ್ರಿ.. ಶ್ರೀಮಂತರ ನಿದ್ದೆ ಕದ್ದ ಖದೀಮರು!
author img

By

Published : Mar 25, 2022, 9:22 AM IST

Updated : Mar 25, 2022, 10:52 AM IST

ಗದಗ: ಗದಗ-ಬೆಟಗೇರಿ ಅವಳಿ ನಗರಗಳಿಗೆ ಖತರ್ನಾಕ್ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು, ರಾತ್ರಿ ವೇಳೆ ಜನರು ಭಯಪಡುವಂತಾಗಿದೆ. ಅದರಲ್ಲೂ ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡಿಕೊಳ್ಳುವ ಖದೀಮರು ಕೆ.ಜಿಗಟ್ಟಲೇ ಚಿನ್ನಾಭರಣ ಲೂಟಿ ಮಾಡುತ್ತಿದ್ದಾರೆ. ಅಪಾರ ಪ್ರಮಾಣದ ಚಿನ್ನಾಭರಣ ಕಳೆದುಕೊಂಡ ಮನೆ ಯಜಮಾನಿಯರು ಕಣ್ಣೀರು ಹಾಕುವಂತಾಗಿದೆ.

ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಸಿದ್ದಲಿಂಗ ರಾಮನಕೊಪ್ಪ ಎಂಬುವರ ಮನೆಯಲ್ಲಿ ಕೆಲ ದಿನಗಳ ಹಿಂದೆ ಮದುವೆ ಕಾರ್ಯಕ್ಕೆಂದು ಬ್ಯಾಂಕ್ ಲಾಕರ್​​ನಲ್ಲಿದ್ದ ಚಿನ್ನವನ್ನು ತಂದಿದ್ದರು. ಚಿನ್ನಾಭರಣ ಧರಿಸಿ ಸಂಭ್ರಮದಿಂದ ಮನೆ ಮಗಳ ಮದುವೆ ಮಾಡಿದ್ದರು. ಆದರೆ, ಮದುವೆ ಬಳಿಕ ಮತ್ತೆ ಬ್ಯಾಂಕ್ ಲಾಕರ್​​ನಲ್ಲಿ ಆಭರಣ ಇಡಬೇಕು ಅನ್ನುವಷ್ಟರಲ್ಲೇ ಕಳ್ಳರ ಗ್ಯಾಂಗ್ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣ ಲೂಟಿ ಮಾಡಿಕೊಂಡು ಪರಾರಿಯಾಗಿದೆ.

ಗದಗ - ಬೆಟಗೇರಿ ಅವಳಿ ನಗರಕ್ಕೆ ಖತರ್ನಾಕ್ ಗ್ಯಾಂಗ್ ಎಂಟ್ರಿ..

ಕೆ.ಜಿಗಟ್ಟಲೇ ಚಿನ್ನಾಭರಣ ಲೂಟಿ: ಕಳ್ಳರು ಸುಮಾರು ಒಂದು ಕೆ.ಜಿಯಷ್ಟು ಚಿನ್ನಾಭರಣ ಲೂಟಿ ಮಾಡಿದ್ದು, ಸಂಜೆ 6.30ರಿಂದ 8 ಗಂಟೆ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ. ಇದರಿಂದ ಗದಗ - ಬೆಟಗೇರಿ ಅವಳಿ ನಗರಗಳ ಜನರು ಬೆಚ್ಚಿಬಿದ್ದಿದ್ದಾರೆ. ಊರ ಮಧ್ಯದಲ್ಲಿರುವ ಮನೆಯಲ್ಲೇ ಕಳ್ಳತನ ನಡೆದಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಮನೆಯ ಯಜಮಾನಿ ಅಪಾರ ಚಿನ್ನಾಭರಣ ಲೂಟಿ ಆಗಿದ್ದಕ್ಕೆ ಕಣ್ಣೀರು ಹಾಕಿದ್ದಾರೆ.

ಮನೆ ಬೀಗ ಹಾಕಿದ್ದಾಗ ಕೃತ್ಯ: ಮದುವೆ ಕಾರ್ಯದ ಬಳಿಕ ಮನೆಯಲ್ಲಿನ ಮಹಿಳೆಯರು ಬೇರೆ ಊರಿಗೆ ತೆರಳಿದ್ದರು. ಮನೆ ಯಜಮಾನ ಸಂಜೆ 6-30ರ ವೇಳೆಗೆ ಮನೆ ಲಾಕ್ ಮಾಡಿಕೊಂಡು ಸಮೀಪದ ಅಂಗಡಿಗೆ ಹೋಗಿದ್ದ. ಇದನ್ನು ಗಮನಿಸಿದ ಕಳ್ಳರು ಅದೇ ಸಮಯದಲ್ಲಿ ಹಿತ್ತಲ ಬಾಗಿಲಿನಿಂದ ಮನೆಯೊಳಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಆದರೆ, ಅಲ್ಲೇ ಇದ್ದ ಬೆಳ್ಳಿಯ ಆಭರಣಗಳನ್ನು ಮುಟ್ಟಿಲ್ಲ. ಬೆಳ್ಳಿ ದೇವರ ಮೂರ್ತಿ ಹಾಗೂ ಅಪಾರ ಬೆಲೆಬಾಳುವ ರೇಷ್ಮೆ ಸೀರೆಗಳನ್ನೂ ಕೂಡ ಕಳ್ಳರು ಹಾಗೆಯೇ ಬಿಟ್ಟು ತೆರಳಿದ್ದಾರೆ.

ಮತ್ತೊಂದು ಪ್ರಕರಣ: ಅಲ್ಲದೆ, ಗದಗ ನಗರದ ಬಸಪ್ಪ ಲೇಔಟ್​​ನಲ್ಲೂ ಸಂಗಮೇಶ್ ಕವಳಿಕಾಯಿ ಎಂಬುವರ ಮನೆಯಲ್ಲೂ ಲೂಟಿ ನಡೆದಿದೆ. ಈ ಮನೆಯಲ್ಲೂ ಕೂಡ ಹಿತ್ತಲ ಬಾಗಿಲಿನಿಂದಲೇ ಪ್ರವೇಶಿಸಿರುವ ಕಳ್ಳರು ಸುಮಾರು 30 ಗ್ರಾಂ ಚಿನ್ನ ಕದ್ದೊಯ್ದಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಕೆಲ ಸಾಮ್ಯತೆ ಇರುವುದರಿಂದ ಒಂದೇ ಗ್ಯಾಂಗ್​ ಈ ಕೃತ್ಯ ಎಸಗಿರುವ ಅನುಮಾನ ದಟ್ಟವಾಗಿದೆ. ಇನ್ನೊಂದೆಡೆ ಗದಗದಲ್ಲಿ ಕಳ್ಳತನವಾದ ಮರು ದಿನವೇ ಹುಬ್ಬಳ್ಳಿಯಲ್ಲೂ ದೊಡ್ಡ ಪ್ರಮಾಣದ ಕಳ್ಳತನವಾಗಿದೆ.

ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ, ಒಂದು ವಾರದಲ್ಲಿ ಮೂರು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಜನರು ಹೇಳುವಂತೆ, ಗದಗ-ಬೆಟಗೇರಿ ಅವಳಿ ನಗರದ ಸೇರಿ ಗದಗ ತಾಲೂಕಿನಲ್ಲೇ ಒಂದು ವಾರದಲ್ಲೇ 18 ಕಳ್ಳತನ ಪ್ರಕರಣ ನಡೆದಿವೆ ಎನ್ನಲಾಗುತ್ತಿದೆ. ಇದು ಅವಳಿ ನಗರದ ಜನರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್​ ಸ್ಟೆಪ್ ಹಾಕಿದ ಸಿದ್ದರಾಮಯ್ಯ

Last Updated : Mar 25, 2022, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.