ETV Bharat / state

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಉಗ್ರಾಣದ ಮೇಲೆ ದಾಳಿ, 40 ಟನ್‌ ಅಕ್ಕಿ ವಶ - ಡಿವೈಎಸ್ಪಿ ಪ್ರಹ್ಲಾದ್

ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಗೋಡೌನ್ ಮೇಲೆ ಆಹಾರ ಇಲಾಖೆ ಅಧಿಕಾರಿ ಪ್ರೀತಿ, ಡಿವೈಎಸ್ಪಿ ಪ್ರಹ್ಲಾದ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Gadag
ಅಕ್ರಮ ದಾಸ್ತಾನಿನ ಮೇಲೆ ದಾಳಿ
author img

By

Published : May 14, 2020, 10:20 AM IST

ಗದಗ: ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಗೊದಾಮಿನ ಮೇಲೆ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಬಡವರ ಹೊಟ್ಟೆ ಸೇರಬೇಕಿದ್ದ 40 ಟನ್‌ಗೂ ಹೆಚ್ಚು ಅಕ್ಕಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ನಗರದ ಅಬ್ಬಿಗೇರಿ ಕಾಂಪೌಂಡ್, ತೀಸ್ ಬಿಲ್ಡಿಂಗ್ ಹಾಗೂ ನಿಸರ್ಗ ಬಡಾವಣೆಯಲ್ಲಿನ ಗೋಡೌನ್​ಗಳಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿಡಲಾಗಿತ್ತು.

ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಗೊಡೌನ್ ಮೇಲೆ ದಾಳಿ

ಕಾನೂನುಬಾಹಿರವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಎರಡು ಟಾಟಾ ಏಸ್ ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಅಕ್ರಮ ಸಂಗ್ರಹಕಾರರ ವಿರುದ್ಧ ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಗದಗ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.