ETV Bharat / state

ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್.. ಜಿಮ್ಸ್​ನಲ್ಲಿ​ ಕೋವಿಡ್ ರೋಗಿಗಳಿಗೆ ಸಂಬಂಧಿಕರೇ ಗತಿ! - ಕೊವಿಡ್ ಸ್ಥಿತಿಯಲ್ಲಿ ಜಿಮ್ಸ್​​​ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್,

ಒಂದು ಕಡೆ ಸಿಬ್ಬಂದಿಯಿಲ್ಲದೇ ಸಂಬಂಧಿಕರೇ ಕೋವಿಡ್​ ರೋಗಿಗಳ ಹಾರೈಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಜಿಮ್ಸ್​​​ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್​ ಆಗಿದ್ದು ರೋಗಿಗಳು ಪರದಾಡುವಂತಾಗಿದೆ. ಈ ದೃಶ್ಯ ಗದಗ ಜಿಲ್ಲೆಯ ಜಿಮ್ಸ್​ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

GIMS City Scanning Center close, GIMS City Scanning Center close in Covid crises, Gadag GIMS news,  ಜಿಮ್ಸ್​​​ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್, ಕೊವಿಡ್ ಸ್ಥಿತಿಯಲ್ಲಿ ಜಿಮ್ಸ್​​​ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್, ಗದಗ ಜಿಮ್ಸ್​ ಸುದ್ದಿ,
ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್
author img

By

Published : Apr 24, 2021, 8:28 AM IST

ಗದಗ : ಇಲ್ಲಿನ ಕೋವಿಡ್ ಕೇರ್ ಸೆಂಟರ್​ ಅವ್ಯವಸ್ಥೆಯ ಆಗರವಾಗಿದೆ. ಹೊರಗಡೆ ಕೋವಿಡ್ ನಿಯಮಾವಳಿಗಳನ್ನ ಪಾಲಿಸದವರ ಮೇಲೆ ದರ್ಪ ತೋರಿಸುವ ಅಧಿಕಾರಿಗಳು ಕೋವಿಡ್ ಸೆಂಟರ್​ನಲ್ಲಿಯೇ ನಿಯಮಗಳು ಪಾಲನೆಯಾಗ್ತಿಲ್ಲ ಅನ್ನೋದರ ಬಗ್ಗೆ ಗಮನ ಹರಿಸಿಲ್ಲ. ಅಷ್ಟೇ ಅಲ್ಲ, ಇಲ್ಲಿನ ಸಿಟಿ ಸ್ಕ್ಯಾನಿಂಗ್​ ಸೆಂಟರ್​ ಸಹ ಬಂದ್​ ಆಗಿದ್ದು, ಕೋವಿಡ್​ ರೋಗಿಗಳ ಜೊತೆ ಸಂಬಂಧಿಕರು ಪರದಾಡುವಂತಾಗಿದೆ.

ಸಿಬ್ಬಂದಿ ಕೊರತೆ, ಕೊವಿಡ್ ರೋಗಿಗಳನ್ನು ನೋಡಿಕೊಳ್ಳಲು ಸಂಬಂಧಿಕರೇ ಗತಿ..!

ಜಿಮ್ಸ್​ ಆಸ್ಪತ್ರೆಯಲ್ಲಿ ಈಗ ಸಿಬ್ಬಂದಿಯರ ಕೊರತೆಯುಂಟಾಗಿದೆ. ಒಬ್ಬ ಕೋವಿಡ್ ಸೋಂಕಿನ ಜೊತೆಗೆ ನೆಗೆಟಿವ್ ಇರುವ ವ್ಯಕ್ತಿಯನ್ನೂ ಸಹ ಒಳಗಡೆ ಬಿಡಲಾಗ್ತಿದೆ. ಪಾಸಿಟಿವ್ ರೋಗಿಯ ಜೊತೆಗೆ ಆಸ್ಪತ್ರೆಯಲ್ಲಿ ನೆಗೆಟಿವ್ ಇರುವ ಸಂಬಂಧಿಕರಿಗೆ ಎಂಟ್ರಿ ಕೊಡಲಾಗ್ತಿದೆ.

ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್

ರೋಗಿಗಳ ಆರೈಕೆ ಮಾಡಲು ರಿಸ್ಕ್​ನಲ್ಲೇ ಕೋವಿಡ್ ವಾರ್ಡ್​ಗೆ ಸೋಂಕಿತರ ಸಂಬಂಧಿಕರು ತೆರಳುತ್ತಿದ್ದಾರೆ. ಸಿಬ್ಬಂದಿ ಕೊರತೆ ಹಿನ್ನೆಲೆ ಸೋಂಕಿತರನ್ನ ವ್ಹೀಲ್​ಚೇರ್​ನಲ್ಲಿ ಕರೆತರಲು ರೋಗಿಗಳ ಸಂಬಂಧಿಕರೇ ಬರಬೇಕು. ಸಂಬಂಧಿಕರನ್ನ ನೋಡಿಕೊಳ್ಳುವ ಸಂಬಂಧಿಕರಿಗೆ ಕೊನೆ ಪಕ್ಷ ಮುಂಜಾಗ್ರತವಾಗಿ ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಇಲ್ಲದೇ ವಾರ್ಡ್​ಗೆ ಪ್ರವೇಶ ಕಲ್ಪಿಸಲಾಗುತ್ತಿದೆ.

ಸೋಂಕಿತರಿಗೆ ನೀರು ತರಲು, ಊಟ ಮಾಡಿಸಲು ಅಟೆಂಡರ್ಸ್ ಬೇಕು. ಆದರೆ ಇಲ್ಲಿ ಸಿಬ್ಬಂದಿ ಇರದ ಕಾರಣ ನಮ್ಮವರನ್ನು ನಾವೇ ನೋಡಿಕೊಳ್ಳಲು ರಿಸ್ಕ್ ತಗೋತಿವಿ ಅಂತ ಸಂಬಂಧಿಕರು ಹೇಳ್ತಿದ್ದಾರೆ.

ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಜಿಮ್ಸ್​​​ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್..!

ಇಲ್ಲಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಬಂದ್ ಆಗಿದ್ದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಎರಡ್ಮೂರು ದಿನದಿಂದ ಸಿಟಿ ಸ್ಕ್ಯಾನ್ ಬಂದ್ ಆಗಿದ್ದಕ್ಕೆ ಕೋವಿಡ್​ ಸೋಂಕಿತ ರೋಗಿಗಳು ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಜಿಮ್ಸ್​ ಆಸ್ಪತ್ರೆಯಲ್ಲಿ ಏಕೈಕ ಸ್ಕ್ಯಾನ್ ಸೆಂಟರ್ ಇರೋದ್ರಿಂದ ಹಳ್ಳಿಗಳಿಂದ ಬಂದಿರುವ ರೈತಾಪಿ ಜನ ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಶಿರಹಟ್ಟಿ ತಾಲೂಕಿನ ಚಬ್ಬಿ ತಾಂಡಾದ ನಿವಾಸಿ ಪರಸಪ್ಪ ಲಮಾಣಿ ಎಂಬುವರು ತೀವ್ರ ಉಸಿರಾಟ ತೊಂದರೆ ಅನುಭವಿಸುತ್ತಿದ್ದಾರೆ. ಶಿರಹಟ್ಟಿ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್​ ಟೆಸ್ಟ್​ಗೂ ಒಳಗಾಗಿದ್ದರು. ಆದ್ರೆ ವೈದ್ಯರು ಎದೆ ಸ್ಕ್ಯಾನ್​ ಮಾಡಿಸಿಕೊಂಡು ಬರಲು ತಿಳಿಸಿದ್ದರಿಂದ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿರುವ ಸ್ಕ್ಯಾನ್ ಸೆಂಟರ್​ಗೆ ಆಗಮಿಸಿದ್ದಾರೆ. ಆದರೆ ಇಲ್ಲಿ ಎರಡು ದಿನದಿಂದ ಸ್ಕ್ಯಾನ್ ಸೆಂಟರ್​ ಬಂದ್ ಆಗಿದೆ ಅಂತ ಅಳಲು ತೋಡಿಕೊಂಡರು.

ನಾನು ಪದವಿ ವಿದ್ಯಾರ್ಥಿಯಾಗಿದ್ದು, ನಮ್ಮ ತಂದೆ ನನ್ನ ಕೂಲಿ ನಾಲಿ ಮಾಡಿ ಓದಿಸ್ತಿದ್ದಾರೆ. ನಾವು ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲ. ಆದರೆ ಇಲ್ಲಿ ಸ್ಕ್ಯಾನ್​ ಬಂದ್​ ಆಗಿರೋದ್ರಿಂದ ಖಾಸಗಿ ಸ್ಕ್ಯಾನ್ ಸೆಂಟರ್​ಗೆ ಹೋಗಿ ಅಂತ ಹೇಳ್ತಿದ್ದಾರೆ. ಖಾಸಗಿ ಸ್ಕ್ಯಾನ್​ ಸೆಂಟರ್​​ನಲ್ಲಿ 6 ಸಾವಿರದಿಂದ 7 ಸಾವಿರದವರೆಗೆ ಬಿಲ್​ ಮಾಡ್ತಾರೆ. ಅಷ್ಟೊಂದು ಹಣ ನಾವು ಎಲ್ಲಿಂದ ತರೋದು ಅಂತ ತಮ್ಮ ಸಮಸ್ಯೆಯನ್ನು ರೋಗಿ ಪರಸಪ್ಪ ಅವರ ಮಗ ಸುರೇಶ್ ಲಮಾಣಿ ಹೇಳಿಕೊಂಡರು.

ಹೀಗೆ ಗಜೇಂದ್ರಡ, ರೋಣ, ಶಿರಹಟ್ಟಿಯಿಂದ ಹಲವಾರು ರೋಗಿಗಳು ಬಂದು ಸ್ಕ್ಯಾನ್​ ಮಾಡಿಸಿಕೊಳ್ಳಲಾಗದೇ ಆಸ್ಪತ್ರೆಯ ಹೊರಗಡೆ ನರಳಾಡುತ್ತಿದ್ದಾರೆ. ಇತ್ತ ಸಿಬ್ಬಂದಿ ಹೇಳೋದೆ ಬೇರೆ. ಸ್ಕ್ಯಾನ್​​ ಮಷಿನ್​ ಟ್ಯೂಬ್​ ಹೋಗಿದೆ. ಅದು ರಿಪೇರಿ ನಡೆದಿದೆ. ರಿಪೇರಿ ಆಗೋವರೆಗೂ ಕಾಯಲೇಬೇಕು ಅಂತಿದ್ದಾರೆ. ಆದ್ರೆ ರೋಗಿಗಳ ಜೀವಕ್ಕೆ ಏನಾದರೂ ತೊಂದರೆಯಾದರೆ ಹೊಣೆ ಯಾರು ಅಂತಿದ್ದಾರೆ ಸಂಬಂಧಿಕರು.

ಒಟ್ಟಿನಲ್ಲಿ ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನ್​ ಬಂದ್​ ಆದ ಹಿನ್ನೆಲೆ ಸಂಬಂಧಿಕರು ಪರದಾಡುವಂತಾಗಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ವೈದ್ಯಕೀಯ ಇಲಾಖೆ ಮುಂದೆ ಏನು ಮಾಡುತ್ತೆಂಬುದನ್ನು ಕಾದು ನೋಡ್ಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.