ETV Bharat / state

ದೇಶದಲ್ಲಿಯೇ ಅತೀ ಗುಣಮಟ್ಟದ ಗಾಳಿ ಹೊಂದಿರುವ ನಗರಗಳ ಸಾಲಿನಲ್ಲಿ ಗದಗ ಪ್ರಥಮ - ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಇಂಡೆಕ್ಸ್ ವ್ಯಾಲ್ಯೂ 10 ಅಂಕ ಹೊಂದಿದ್ದು, ಗದಗ ಪ್ರಥಮ ಸ್ಥಾನ ಹೊಂದಿದೆ. ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ ಹೊಂದಿವೆ. 65 ನಗರಗಳಲ್ಲಿ ಸಮಾಧಾನಕರ, ಮತ್ತು 21 ನಗರಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇದೆ ಎಂದು ಪ್ರಕಟಿಸಿದೆ.

Gadag
Gadag
author img

By

Published : Jun 16, 2021, 1:44 PM IST

ಗದಗ: ಗದಗ ನಗರ ಈಗ ಇಡೀ ದೇಶದಲ್ಲಿಯೇ ಶುದ್ಧ ಹಾಗೂ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ. ಜೂನ್ 15 ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ದೇಶದ ಒಟ್ಟು 131 ನಗರಗಳ ಪೈಕಿ ಗದಗ ನಗರಕ್ಕೆ ಪ್ರಥಮ ಸ್ಥಾನ ಲಭಿಸಿದೆ.

Gadag
ಗದಗಕ್ಕೆ ಪ್ರಥಮ ಸ್ಥಾನ

ಇಂಡೆಕ್ಸ್ ವ್ಯಾಲ್ಯೂ 10 ಅಂಕ ಹೊಂದಿದ್ದು, ಗದಗ ಪ್ರಥಮ ಸ್ಥಾನ ಹೊಂದಿದೆ. ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ ಹೊಂದಿವೆ. 65 ನಗರಗಳಲ್ಲಿ ಸಮಾಧಾನಕರ, ಮತ್ತು 21 ನಗರಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇದೆ ಎಂದು ಪ್ರಕಟಿಸಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ 24 ಗಂಟೆಯಲ್ಲಿನ ಗಾಳಿಯನ್ನು ಆಧರಿಸಿ ಈ ಪ್ರಕಟಣೆ ಹೊರಡಿಸಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಳಿಕೆ ಕಾಣಬಹುದು. ಯಾಕೆಂದರೆ ಸದ್ಯ ಲಾಕ್ ಡೌನ್ ಇರೋದರಿಂದ ವಾಹನಗಳ ಓಡಾಟ, ಕೈಗಾರಿಕೆಗಳ ಕಾರ್ಯ ಸ್ಥಗಿತ ಹೀಗೆ ನಾನಾ ಕಾರಣಗಳು ಸಹ ಸೇರಿವೆ. ಗದಗ ಜಿಲ್ಲೆ ಸಹ್ಯಾದ್ರಿ ಅಂತ ಕರೆಸಿಕೊಳ್ಳುವ ಕಪ್ಪತಗುಡ್ಡ ಹೊಂದಿದ್ದರಿಂದ ಇದು ಅತೀ ವೇಗವಾಗಿ ಗಾಳಿ ಬೀಸುವ ಪ್ರದೇಶವೂ ಹೌದು. ಈ ಕಾರಣಕ್ಕೆ ಇಲ್ಲಿ ನೂರಾರು ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಿ ವಿದ್ಯುತ್ ತಯಾರಿಸಲಾಗ್ತಿದೆ. ಇದರ ಜೊತೆಗೆ ಈಗ ಸ್ವಚ್ಛ ಗಾಳಿ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.