ETV Bharat / state

ಗದಗದಲ್ಲಿ ಕೊರೊನಾ ಸೋಂಕಿತರಿಂದ ಆಸ್ಪತ್ರೆ ಫುಲ್.. ಮುಂದೇನು? - Gadag coronavirus updates

ಜಿಮ್ಸ್ ಆಸ್ಪತ್ರೆ ಭರ್ತಿಯಾಗಿದ್ದರಿಂದ ಅನಿವಾರ್ಯವಾಗಿ ವೆಂಟಿಲೇಟರ್ ಸೌಕರ್ಯ ಇರುವ ಹೆರಿಗೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಗದಗದಲ್ಲಿ ಕೊರೊನಾ ಸೋಂಕಿತರಿಂದ ಆಸ್ಪತ್ರೆ ಫುಲ್

author img

By

Published : Jul 1, 2020, 11:43 PM IST

ಗದಗ: ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಜಿಲ್ಲೆಯ ಮೊದಲ‌ ಕೋವಿಡ್- 19 ಆಸ್ಪತ್ರೆ ಭರ್ತಿಯಾಗಿದ್ದು, ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೊರೊನಾ‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯ ಗದಗ ತಾಲೂಕು, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ರೋಣ ತಾಲೂಕಿನ ಹಳ್ಳಿಗಳಲ್ಲಿಯೂ ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಅದರಲ್ಲೂ ಮುಂಡರಗಿ ಪಟ್ಟಣದಲ್ಲಿ ಕೇವಲ ಒಂದು ವಾರದಲ್ಲಿ 42 ಜನರಿಗೆ ಕೋವಿಡ್​ ಸೋಂಕಿತರು ಕಂಡುಬಂದಿದ್ದಾರೆ. ನಗರದ ಜಿಮ್ಸ್ ಕೋವಿಡ್- 19 ಆಸ್ಪತ್ರೆ ಭರ್ತಿಯಾಗಿದ್ದು, ಮಲ್ಲಸಮುದ್ರದ ಮೊರಾರ್ಜಿ ವಸತಿ ಶಾಲೆ ಹಾಗೂ ಮುಂಡರಗಿ ತಾಲೂಕಿನ ಹೀರೆವಡ್ಡಟ್ಟಿಯ ಮೊರಾರ್ಜಿ ಶಾಲೆಯಲ್ಲಿ 30 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗದಗದಲ್ಲಿ ಕೊರೊನಾ ಸೋಂಕಿತರಿಂದ ಆಸ್ಪತ್ರೆ ಫುಲ್

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ‌ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತದ್ದಂತೆ, ಗದಗ ಜಿಲ್ಲಾ ಉಸ್ತುವಾರಿ ‌ಸಚಿವ ಸಿ.ಸಿ ಪಾಟೀಲ್ ಅವರು ಜಿಲ್ಲೆಯ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಮೂರು ದಿನಗಳ‌ ಕಾಲ ಕೊರೊನಾ ಕುರಿತು ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮದುವೆ ಕಾರ್ಯದಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೊರೊನಾ ಕಂಟ್ರೋಲ್ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಕೋವಿಡ್- 19 ನಿಯಮ ಉಲ್ಲಂಘನೆ ಮಾಡಿದ್ರೆ ಸೂಕ್ತವಾದ ಕ್ರಮ ಕೈಗೊಳ್ಳಿ ಎಂದು ಸೂಚನೆ ಸಹ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.