ETV Bharat / state

ಸ್ವಂತ ಸೂರಿಲ್ಲದೇ ಶಿಥಿಲ ಮನೆಯಲ್ಲಿ ಅಂತಾರಾಷ್ಟ್ರೀಯ ಹಾಕಿ ಪಟು ವಾಸ: ಗೆದ್ದಾಗ ಸಂಭ್ರಮಿಸುವ ಸರ್ಕಾರಕ್ಕೆ ಇದು ಕಾಣಲ್ವೆ? - ಖೇಲೊ ಇಂಡಿಯಾ

2016ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಟೀಮ್​ನಲ್ಲಿ ಆಟವಾಗಿದ್ದ ಪ್ರತಿಭೆ ಹಾಕಿ ಆಟಗಾರ ಹರೀಶ್​ ಸೋಮಪ್ಪ ಮುಟಗಾರ. ಅಲ್ಲದೇ, ಇತ್ತೀಚೆಗೆ ನಡೆದ 'ಖೇಲೊ ಇಂಡಿಯಾ' ಕ್ರೀಡಾ ಕೂಟದಲ್ಲಿ ಬೆಂಗಳೂರು ಸೆಂಟ್ರಲ್ ಯುನಿವರ್ಸಿಟಿ ಟೀಮ್ ಗೆ ಆಡಿ ಹೆಚ್ಚು ಗೋಲ್ ಗಳಿಸಿ ಅಬ್ಬರಿಸಿದ್ದ. ಆದ್ರೆ ಏನ್​ ಬಂತು ದೇಶಕ್ಕಾಗಿ, ನಾಡಿಗಾಗಿ ಆಡಿದರೂ ಸರಿಯಾದ ಸೂರು ಇಲ್ಲದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

gadag-haki-national-player-harish-mutagar-problems
ಅಂತರರಾಷ್ಟ್ರೀಯ ಹಾಕಿ ಪಟು ಹರೀಶ್​
author img

By

Published : Oct 26, 2021, 9:55 PM IST

Updated : Oct 26, 2021, 10:44 PM IST

ಗದಗ: ಸ್ಥಳೀಯ ಚುನಾವಣೆಯಲ್ಲೂ ಗೆದ್ದು, ತಿಂಗಳಲ್ಲಿಯೇ ಕೋಟಿಗಟ್ಟಲೇ ಖರ್ಚು ಮಾಡಿ ಮನೆ ಕಟ್ಟಿಸುವ ಜನ ನಾಯಕರ ಮಧ್ಯ ದೇಶಕ್ಕಾಗಿ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರತಿನಿಧಿಸುವ ಆಟಗಾರನೊಬ್ಬ ರಸ್ತೆ ಪಕ್ಕದಲ್ಲಿ ಇವತ್ತೋ ನಾಳೆಯೋ ಬೀಳುವ ಮನೆಯಲ್ಲಿ ವಾಸವಾಗಿದ್ದಾನೆ. ಕಾಲು ಇಲ್ಲದ ತಂದೆ, ಕೂಲಿ ಮಾಡುವ ತಾಯಿ, ಬಡತನದ ಬೆಂಕಿಯಲ್ಲಿ ಯುವ ಪ್ರತಿಭೆಯೊಂದು ಸರ್ಕಾರದ ನಿರ್ಲಕ್ಷ್ಯದಿಂದ ಕಣ್ಮರೆಯಾಗುತ್ತಿದೆ.

ಸ್ವಂತ ಸೂರಿಲ್ಲದೇ ಶಿಥಿಲ ಮನೆಯಲ್ಲಿ ಅಂತಾರಾಷ್ಟ್ರೀಯ ಹಾಕಿ ಪಟು ವಾಸ

ಹೌದು, ಗದಗ ಬೆಟಗೇರಿಯ ಗಾಂಧಿ ಬಡಾವಣೆಯ ನಿವಾಸಿ ಹಾಕಿ ಆಟಗಾರ ಹರೀಶ್​ ಸೋಮಪ್ಪ ಮುಟಗಾರ, 2016ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಟೀಮ್​ನಲ್ಲಿ ಆಟವಾಗಿದ್ದ ಪ್ರತಿಭೆ. ಅಲ್ಲದೇ, ಇತ್ತೀಚೆಗೆ ನಡೆದ 'ಖೇಲೊ ಇಂಡಿಯಾ' ಕ್ರೀಡಾ ಕೂಟದಲ್ಲಿ ಬೆಂಗಳೂರು ಸೆಂಟ್ರಲ್ ಯುನಿವರ್ಸಿಟಿ ಟೀಮ್​​​ಗೆ ಆಡಿ ಹೆಚ್ಚು ಗೋಲ್ ಗಳಿಸಿ ಅಬ್ಬರಿಸಿದ್ದ. ಆದರೆ, ಏನ್​ ಬಂತು ದೇಶಕ್ಕಾಗಿ, ನಾಡಿಗಾಗಿ ಆಡಿದರೂ ಸರಿಯಾದ ಸೂರು ಇಲ್ಲದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಹರೀಶ್​​ ತಂದೆ ಸೋಮಪ್ಪ ಅವರಿಗೆ ಇಪತ್ತು ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಹೋಗಿದೆ‌. ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡ್ತಿದಾರೆ. ಅಣ್ಣ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದು, ಅಷ್ಟಿಷ್ಟು ಸಹಾಯ ಆಗ್ತಿದೆ. ಕುಟುಂಬದ ಪರಿಸ್ಥಿತಿ ಹೀಗಿದ್ದರೂ 23 ವರ್ಷದ ಹರೀಶ್ ದೇಶಕ್ಕಾಗಿ ಮತ್ತಷ್ಟು ಚಿನ್ನ ಗೆಲ್ಬೇಕು ಅನ್ನೋ ಉಮೇದಿಯಲ್ಲಿದ್ದಾರೆ.

ಪ್ರತಿಭೆ ಗುರುತಿಸಿ ಮನೆ ಮಂಜೂರು ಮಾಡಿ

ಆದರೆ, ಆತನಿಗೆ ಮನೆಯದ್ದೇ ಚಿಂತೆ, ಸತತ ಮಳೆಯಾಗ್ತಿರೋದ್ರಿಂದ ಅದ್ಯಾವಾಗ ಮನೆ ಬೀಳುತ್ತೋ ಅನ್ನೋ ಆತಂಕ. ಹಾಗಾಗಿ ಜಿಲ್ಲೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು ನನ್ನ ಪ್ರತಿಭೆ ಗುರುತಿಸಿ ಮನೆ ಮಂಜೂರು ಮಾಡಿ ಪುಣ್ಯಾನಾದರೂ ಕಟ್ಕೋಳಿ ಅಂತಿದಾರೆ ಹರೀಶ್.

ಬಾಲ್ಯದಿಂದಲೇ ಹಾಕಿ ಹುಚ್ಚು ಹಚ್ಚಿಕೊಂಡ ಹರೀಶ್, ಶಾಲಾ ವಿಭಾಗದಲ್ಲೇ ನ್ಯಾಷನಲ್ ನೆವೆಲ್ ಜ್ಯೂನಿಯರ್ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ದರು. ಅಲ್ಲದೇ ಏಳು ವರ್ಷ ನ್ಯಾಷನಲ್ ಹಾಕಿ ಟೀಮ್​​​​ನ ಸದಸ್ಯರಾಗಿದಾರೆ. ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್ ನಲ್ಲೂ ಹರೀಶ್ ಭಾಗಿಯಾಗಿದ್ದರು. ಇಷ್ಟೆಲ್ಲ ಸಾಧನೆ ಮಾಡಿರುವ ಹರೀಶಗೆ ಸರಿಯಾದ ಸೂರಿಲ್ಲಾ. ಇರುವ ಮನೆ ಶಿಥಿಲಾವಸ್ಥೆ ತಲುಪಿದೆ.

ಗೆದ್ದಾಗ ಆಟಗಾರನನ್ನು ಹೊಗಳಿ ಸನ್ಮಾನ ಸಮಾರಂಭ ಮಾಡುವ ಜನಪ್ರತಿನಿಧಿಗಳು ಅವರ ಕಷ್ಟಗಳಿಗೂ ಸರಿಯಾಗಿ ಸ್ಪಂದಿಸಬೇಕಿದೆ. ಗೆದ್ದಾಗ ಮಾತ್ರ ಇವ ನಮ್ಮವ ಎನ್ನದೇ, ಅವರ ಸಾಧನೆಯ ಹಾದಿಯನ್ನು ಸರಳ ಮಾಡುವ ನಿಟ್ಟಿನಲ್ಲಿಯೂ ಕೆಲಸ ನಿರ್ವಹಿಸಬೇಕಿದೆ. ಬಡತನ ಸಂಕಷ್ಟಕ್ಕೆ ಸಿಲುಕಿ ಕಣ್ಮರೆಯಾಗುವ ಅದೇಷ್ಟೋ ಪ್ರತಿಭೆಗಳಿಗೆ ಸರ್ಕಾರ ದಾರಿ ತೋರಬೇಕಿದೆ. ಆದರೆ ಇದ್ಯಾವುದನ್ನ ಮಾಡದ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಮಾತ್ರ ವಿಪರ್ಯಾಸವೇ ಸರಿ.

Last Updated : Oct 26, 2021, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.