ಗದಗ: ಅಪರಿಚಿತ ವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಢ ಪಟ್ಟಣದ ಬಳಿ ನಡೆದಿದೆ.
ಗಜೇಂದ್ರಗಢ ಪಟ್ಟಣದ ಕಲಾಲ ಕಾಲೋನಿ ನಿವಾಸಿ ಕಾರ್ತಿಕ್ ಕಲಾಲ (27) ಮೃತ ಸವಾರ. ಕಾರ್ತಿಕ್ ತಲೆ ಭಾಗದ ಮೇಲೆ ವಾಹನ ಹರಿದಿರುವುದರಿಂದ ತಲೆ ಸಂಪೂರ್ಣ ಛಿದ್ರ- ಛಿದ್ರವಾಗಿ ಗುರುತು ಸಿಗದ ಸ್ಥಿತಿಗೆ ತಲುಪಿದೆ.
ಸ್ಥಳಕ್ಕೆ ಗಜೇಂದ್ರಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪಘಾತ ಮಾಡಿದ ವಾಹನ ಯಾವುದು ಎಂದು ತಿಳಿದು ಬಂದಿಲ್ಲ. ಗಜೇಂದ್ರಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿದ ವಾಹನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.