ETV Bharat / state

ಮುದ್ರಣನಗರಿಗೆ ಗುಜರಾತ್​ ನಂಟು, ಮತ್ತೆ ನಾಲ್ವರಿಗೆ ಸೋಂಕು - ಗದಗ್​ನಲ್ಲಿ ಕೊರೊನಾ

ಗದಗದಲ್ಲಿ ಮತ್ತೆ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

gadag hospital
ಗದಗ ಆಸ್ಪತ್ರೆ
author img

By

Published : May 14, 2020, 3:01 PM IST

ಗದಗ​​: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಗುಜರಾತ್​ನ ಅಹಮದಾಬಾದ್​​ನಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರು. ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಇವರಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಸೋಂಕಿತರು ಫೆಬ್ರವರಿಯಲ್ಲಿ ಅಹಮದಾಬಾದ್​ಗೆ ಪ್ರಯಾಣ ಬೆಳೆಸಿ, ಅಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಾಕ್​ಡೌನ್​ ಇದ್ದ ಕಾರಣದಿಂದ ಅಲ್ಲಿಯೇ ನೆಲೆಸಿದ್ದ ಇವರು ಲಾಕ್​ಡೌನ್​ ಸಡಿಲಿಕೆ ಬಳಿಕ ಮೇ 12ರಂದು ಗದಗ್​ ನಗರಕ್ಕೆ ಆಗಮಿಸಿದ್ದರು.

ನಗರಕ್ಕೆ ಬಂದ ಎಲ್ಲರನ್ನೂ ಕನಗಿನಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ 9 ಮಂದಿಯ ಪೈಕಿ, 4 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದವರಿಗೆ ನೆಗೆಟಿವ್ ಬಂದಿದೆ. ಇವರೆಲ್ಲಾ ಗದಗ-ಬೇಟಗೇರಿ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಸೋಂಕಿತರನ್ನು ಜಿಮ್ಸ್​​ನ ಐಸೋಲೇಷನ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ದಿನಗಳ ಹಿಂದಷ್ಟೇ ಕೊರೊನಾ ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದ್ದವು. ಇಂದು ಮತ್ತೆ ನಾಲ್ಕು ದೃಢಪಟ್ಟಿದ್ದು ಸದ್ಯ ಸೋ‌ಕಿತರ ಸಂಖ್ಯೆ 7ಕ್ಕೆ ಏರಿದ್ದು ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.