ಗದಗ: ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಾಜಿ ಪರಿಷತ್ ಸದಸ್ಯ ಎಸ್. ಆರ್. ಪಾಟೀಲ್ ನೇತೃತ್ವದಲ್ಲಿ ಬೃಹತ್ ರ್‍ಯಾಲಿ ಆರಂಭವಾಗಿದೆ. ಗದಗ ಜಿಲ್ಲೆಯ ಬಂಡಾಯದ ನಾಡು ನರಗುಂದದಿಂದ ಆರಂಭವಾದ ಟ್ರ್ಯಾಕ್ಟರ್ ರ್‍ಯಾಲಿ ಬಾಗಲಕೋಟೆ ಮಾರ್ಗವಾಗಿ 17ನೇ ತಾರೀಕು ವಿಜಯಪುರದ ಬೀಳಗಿಗೆ ತಲುಪಲಿದೆ.
ನರಗುಂದ ಪಟ್ಟಣದ ರೈತ ವೀರುಗಲ್ಲಿಗೆ ಪೂಜೆ ಸಲ್ಲಿಸಿ ಎಸ್.ಆರ್. ಪಾಟೀಲ್ ಉತ್ತರ ಕರ್ನಾಟಕದ ಕನಸಿನ ನೀರಾವರಿ ಯೋಜನೆಗಳ ಹೋರಾಟಕ್ಕೆ ಮುನ್ನುಡಿ ಬರೆದರು. ನಂತರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ನಿರ್ಮಾಣವಾಗಿದ್ದ ಶ್ರೀ ಬಿಎಂ ಹೊರಕೇರಿ ವೇದಿಕೆಯಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ವೇದಿಕೆ ಮೂಲಕವೇ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳು ಯಾತ್ರೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ, ಮಹಾದಾಯಿ ಮತ್ತು ನವಲಿ ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಪಡಿಸಲಿ ಎಂದು ಆಗ್ರಹಿಸಿದರು.
ಎಸ್.ಆರ್. ಪಾಟೀಲ್ ಮಾತನಾಡಿ, ನಾಲ್ಕು ದಿನಗಳ ಕಾಲ ನಡೆಯುವ ಬೃಹತ್ ರ್‍ಯಾಲಿಯಲ್ಲಿ ರೈತರು ನೂರಾರು ಟ್ರ್ಯಾಕ್ಟರ್ ನೊಂದಿಗೆ ಭಾಗಿಯಾಗಲಿದ್ದಾರೆ. ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಯ 108 ಗ್ರಾಮಗಳಲ್ಲಿ ಸಂಚರಿಸಲಿದೆ ಎಂದರು.
ಇದನ್ನೂ ಓದಿ: ಈಶ್ವರಪ್ಪ ರಾಕ್ಷಸ ಪ್ರವೃತ್ತಿ ಮನುಷ್ಯ.. 40% ಕಮೀಷನ್ ಪಡೆಯೋ ಬಿಜೆಪಿಯವ್ರು ರಾಕ್ಷಸ್ರೋ, ಮನುಷ್ಯರೋ.. ಸಿದ್ದರಾಮಯ್ಯ