ETV Bharat / bharat

ವಡೋದರಾದ ಐಒಸಿಎಲ್​ ಸಂಸ್ಕರಣಾ ಘಟಕದಲ್ಲಿ ಬೆಂಕಿ, ಇಬ್ಬರು ಸಾವು

ಗುಜರಾತ್​ನ ವಡೋದರದ ಐಒಸಿಎಲ್ ಸಂಸ್ಕರಣಾ ಘಟಕದಲ್ಲಿ ಟ್ಯಾಂಕ್​ ಸ್ಪೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ.

fire-at-vadodara-iocl-refinery-death-toll-rises-to-2
ಸಂಗ್ರಹ ಚಿತ್ರ (ETV Bharat)
author img

By PTI

Published : Nov 12, 2024, 11:49 AM IST

ವಡೋದರಾ(ಗುಜರಾತ್): ಇಲ್ಲಿನ ಇಂಡಿಯನ್​ ಆಯಿಲ್​ ಕಾರ್ಪೊರೇಷನ್‌ (ಐಒಸಿಎಲ್​) ಸಂಸ್ಕರಣಾ ಘಟಕದಲ್ಲಿ ಸೋಮವಾರ ಮಧ್ಯಾಹ್ನ ಅಗ್ನಿ ಅನಾಹುತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಶೇಖರಣಾ ಟ್ಯಾಂಕ್​ ಸ್ಪೋಟಗೊಂಡ ನಂತರ ಮತ್ತೆರಡು ಟ್ಯಾಂಕ್​ಗಳಿಗೆ ಬೆಂಕಿಯ ಕೆನ್ನಾಲಿಗೆ ಹರಡಿತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜವಾಹರ್​ ನಗರ ಪೊಲೀಸ್​ ಇನ್ಸ್‌ಪೆಕ್ಟರ್​ ಎ.ಬಿ.ಮೊರಿ ಮಾಹಿತಿ ನೀಡಿದರು.

ಧಿಮಂತ್​​ ಮಕ್ವಾನಾ ಮತ್ತು ಶೈಲೇಶ್​ ಮಕ್ವಾನಾ ಎಂಬಿಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಐಒಸಿಎಲ್​ ಅಧಿಕಾರಿಗಳು ಹೇಳಿದ್ದಾರೆ.

ಅಗ್ನಿಶಾಮಕ ದಳದ ನಿರಂತರ ಪ್ರಯತ್ನದ ಬಳಿಕ ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ, ಸಿಎಂ, ಸೆಲೆಬ್ರಿಟಿಗಳು ಬಳಸುವ ಬುಲೆಟ್ ಪ್ರೂಫ್ ವಾಹನ ತಯಾರಿಸುವುದೆಲ್ಲಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.