Oppo Find X8 Series: ಒಪ್ಪೋ ಫೈಂಡ್ ಎಕ್ಸ್8 ಸೀರಿಸ್ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ಪ್ರಸ್ತುತಪಡಿಸುತ್ತಿರುವ ಕಂಪನಿ ಈ ಸೀರಿಸ್ನೊಂದಿಗೆ ಪ್ರೀಮಿಯಂ ವಿಭಾಗಕ್ಕೆ ಬಂದಿದೆ. ಒಪ್ಪೋ ಈ ಸೀರಿಸ್ನಲ್ಲಿ ಫೈಂಡ್ ಎಕ್ಸ್8 ಮತ್ತು ಫೈಂಡ್ ಎಕ್ಸ್8 ಪ್ರೋ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ.
ಸ್ಮಾರ್ಟ್ಫೋನ್ಗಳನ್ನು MediaTek Dimension 9400 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಿದೆ. ಎರಡೂ ಮೊಬೈಲ್‌ಗಳು ಕ್ವಾಡ್ 50-ಮೆಗಾಪಿಕ್ಸೆಲ್ ಹ್ಯಾಸೆಲ್‌ಬ್ಲಾಡ್-ಟ್ಯೂನ್ಡ್ ಕ್ಯಾಮೆರಾ ಸೆಟಪ್ ಹೊಂದಿವೆ.
Now’s the moment we’ve been waiting for… The #OPPOFindX8Series starts at Rs 69,999/-
— OPPO India (@OPPOIndia) November 21, 2024
Pre-order now and take the leap into extraordinary.#FindYourBiggerPicture #OPPOAIPhone pic.twitter.com/aBxHYwoj0B
ಒಪ್ಪೋ ಫೈಂಡ್ ಎಕ್ಸ್8: ಒಪ್ಪೋ ಫೈಂಡ್ ಎಕ್ಸ್8 12GB RAM, 256GB ಸ್ಟೋರೇಜ್ನ ಬೇಸ್ ಮಾಡೆಲ್ ಬೆಲೆ 69,999 ರೂಪಾಯಿಯಿಂದ ಶುರುವಾಗುತ್ತದೆ. 16GB + 512GB ಸ್ಟೋರೇಜ್ ಮಾಡೆಲ್ ಬೆಲೆ 79,999 ರೂಪಾಯಿ ನಿಗದಿಪಡಿಸಿದೆ. ಸ್ಪೇಸ್ ಬ್ಲ್ಯಾಕ್ ಮತ್ತು ಸ್ಟಾರ್ ಗ್ರೇ ಎಂಬ ಎರಡು ಕಲರ್ಗಳ ಆಯ್ಕೆಗಳನ್ನು ಹೊಂದಿವೆ.
ಒಪ್ಪೋ ಫೈಂಡ್ ಎಕ್ಸ್8 ಪ್ರೋ: ಫೈಂಡ್ ಎಕ್ಸ್8 ಪ್ರೋ ಅನ್ನು ಒಂದೇ ಟೈಪ್ನ RAM ಮತ್ತು ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 99,999 ರೂಪಾಯಿ ಇದೆ. ಪರ್ಲ್ ವೈಟ್ ಮತ್ತು ಸ್ಪೇಸ್ ಬ್ಲ್ಯಾಕ್ ಎಂಬ ಎರಡು ಕಲರ್ಗಳ ಆಯ್ಕೆಗಳನ್ನು ಹೊಂದಿದೆ.
ಗ್ರಾಹಕರು 'ಒಪ್ಪೋ ಫೈಂಡ್ ಎಕ್ಸ್8' ಮತ್ತು 'ಒಪ್ಪೋ ಫೈಂಡ್ ಎಕ್ಸ್8 ಪ್ರೋ' ಮೊಬೈಲ್‌ಗಳನ್ನು ಡಿಸೆಂಬರ್ 3ರಿಂದ ಒಪ್ಪೋ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತದ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಖರೀದಿಸಬಹುದು.
All the reasons why the #OPPOFindX8 is a must buy. Let’s dive in.#OPPOFindX8Series #OPPOAIPhone. pic.twitter.com/HTRjhrwwb8
— OPPO India (@OPPOIndia) November 21, 2024
ವಿಶೇಷತೆಗಳು: 'ಒಪ್ಪೋ ಫೈಂಡ್ ಎಕ್ಸ್8' ಮತ್ತು 'ಒಪ್ಪೋ ಫೈಂಡ್ ಎಕ್ಸ್8 ಪ್ರೋ' ಎರಡೂ ಮೊಬೈಲ್‌ಗಳು Android 15-ಆಧರಿತ ColorOS 15ನಲ್ಲಿ ರನ್ ಆಗುತ್ತವೆ. ಎರಡೂ ಫೋನ್‌ಗಳು ಡ್ಯುಯಲ್-ಸಿಮ್ (ನ್ಯಾನೊ + ನ್ಯಾನೊ) ಸಂಪರ್ಕವನ್ನು ಸಪೋರ್ಟ್ ಮಾಡುತ್ತವೆ.
'ಒಪ್ಪೋ ಫೈಂಡ್ ಎಕ್ಸ್8' ಮಾಡೆಎಲ್ 6.59-ಇಂಚಿನ (1,256x2,760 ಪಿಕ್ಸೆಲ್ಸ್) LTPO AMOLED ಸ್ಕ್ರೀನ್ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 4,500nits ಪೀಕ್ ಬ್ರೈಟ್ನೆಸ್, 460ppi ಪಿಕ್ಸೆಲ್ ಡೆನ್ಸಿಟಿಯೊಂದಿಗೆ ಬರುತ್ತದೆ.
'ಒಪ್ಪೋ ಫೈಂಡ್ ಎಕ್ಸ್8 ಪ್ರೋ' ಮಾದರಿಯು 450ppi ಪಿಕ್ಸೆಲ್ ಡೆನ್ಸಿಟಿಯೊಂದಿಗೆ 6.78-ಇಂಚಿನ (1,264x2,780 ಪಿಕ್ಸೆಲ್ಸ್) LTPO AMOLED ಸ್ಕ್ರೀನ್ ಹೊಂದಿದೆ. ಇದರ ರಿಫ್ರೆಶ್ ರೇಟ್ ಮತ್ತು ಪೀಕ್ ಬ್ರೈಟ್ನೆಸ್ ಮಟ್ಟಗಳು ಪ್ರಮಾಣಿತ ಮಾದರಿಗೆ ಹೋಲುತ್ತವೆ.
TSMC 3nm ಪ್ರಕ್ರಿಯೆ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ MediaTek ಆಕ್ಟಾ-ಕೋರ್ ಡೈಮೆನ್ಶನ್ 9400 ಪ್ರೊಸೆಸರ್‌ನೊಂದಿಗೆ ಬಂದಿರುವ ಭಾರತದಲ್ಲಿನ ಮೊದಲ ಸ್ಮಾರ್ಟ್‌ಫೋನ್‌ಗಳಿವು. ಎರಡೂ ಮಾದರಿಗಳು 16GB ವರೆಗೆ LPDDR5X RAM ಮತ್ತು 512GB ಯ UFS 4.0 ಇನ್ಬಿಲ್ಡ್ ಸ್ಟೋರೇಜ್ ಆಯ್ಕೆ ಹೊಂದಿವೆ.
ಒಪ್ಪೋ ಫೈಂಡ್ ಎಕ್ಸ್8 ಕ್ಯಾಮೆರಾ ಸೆಟಪ್: ಒಪ್ಪೋ ಫೈಂಡ್ ಎಕ್ಸ್8 ಸ್ಮಾರ್ಟ್ಫೋನ್ Sony LTY-700 ಸೆನ್ಸಾರ್ (f/1.8), 120-ಡಿಗ್ರಿ ಫೀಲ್ಡ್-ಆಫ್-ವ್ಯೂ (f/2.0) ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸಹ ಇದೆ. 3x ಆಪ್ಟಿಕಲ್ ಜೂಮ್, f/2.6 ಜೊತೆಗೆ 50-ಮೆಗಾಪಿಕ್ಸೆಲ್ Sony LYT-600 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇದೆ. ಇದು ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು ಒಪ್ಪೋ ಫೈಂಡ್ ಎಕ್ಸ್8 ಪ್ರೋ ಮಾಡೆಲ್ನಲ್ಲಿಯೂ ಲಭ್ಯ.
Key features, bold expectations. Dive into everything the #OPPOFindX8Pro offers and why it’s built for you.#OPPOFindX8Series #OPPOAIPhone pic.twitter.com/k2TNSIPZ2m
— OPPO India (@OPPOIndia) November 21, 2024
ಒಪ್ಪೋ ಫೈಂಡ್ ಎಕ್ಸ್8 ಪ್ರೋ ಕ್ಯಾಮೆರಾ ಸೆಟಪ್: ಒಪ್ಪೋ ಫೈಂಡ್ ಎಕ್ಸ್8 ಪ್ರೋ ಮೊಬೈಲ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು LYT-808 ಸೆನ್ಸಾರ್‌ನೊಂದಿಗೆ (f/1.6), 120-ಡಿಗ್ರಿ ಫೀಲ್ಡ್-ಆಫ್-ವ್ಯೂ (f/2.0) ಜೊತೆಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಇದು 3x ಆಪ್ಟಿಕಲ್ ಜೂಮ್ (f/2.6) ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ LYT-600 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಸಹ ಹೊಂದಿದೆ. ಇವುಗಳಲ್ಲದೆ, ಮೊಬೈಲ್ 50-ಮೆಗಾಪಿಕ್ಸೆಲ್ ಸೋನಿ IMX858 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು 6x ಆಪ್ಟಿಕಲ್ ಜೂಮ್ (f/4.3) ಹೊಂದಿದೆ.
ಒಪ್ಪೋ ಫೈಂಡ್ ಎಕ್ಸ್8 ಸೀರಿಸ್ ಬ್ಯಾಟರಿಗಳು:
- 'ಫೈಂಡ್ ಎಕ್ಸ್8' ಮೊಬೈಲ್‌ನಲ್ಲಿ 5,630mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಅಳವಡಿಸಲಾಗಿದೆ. ಇದು 80W (SuperVOOC), 50W (AirVOOC) ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
- 'ಫೈಂಡ್ ಎಕ್ಸ್8 ಪ್ರೋ' ಫೋನ್ 5,910mAh ಬ್ಯಾಟರಿ ಹೊಂದಿದೆ. 'ಫೈಂಡ್ ಎಕ್ಸ್8'ನಂತೆಯೇ ಚಾರ್ಜಿಂಗ್ ಸ್ಪೀಡ್ ಸಪೋರ್ಟ್ ಮಾಡುತ್ತದೆ.
- ಎರಡೂ ಫೋನ್‌ಗಳು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತವೆ.
- ಟ್ರೈ-ಸ್ಟೇಟ್ ಅಲರ್ಟ್ ಸ್ಲೈಡರ್ ಇದೆ.
- ಎರಡೂ ಫೋನ್‌ಗಳು IP68/IP69 ರೇಟಿಂಗ್‌ನೊಂದಿಗೆ ಡಸ್ಟ್ ಆ್ಯಂಡ್ ವಾಟರ್ ರೆಸಿಸ್ಟೆನ್ಸಿ ಹೊಂದಿವೆ.
ಇದನ್ನೂ ಓದಿ: ಐಟಿ-ಬಿಟಿ ಇಲಾಖೆಯಿಂದ 'ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ' ಬಿಡುಗಡೆ