ETV Bharat / technology

ಪ್ರತಿದಿನ 1.35 ಕೋಟಿ ಫ್ರಾಡ್​ ಕಾಲ್ಸ್​ ಬ್ಲಾಕ್,​ ಸಾರ್ವಜನಿಕರ ₹2,500 ಕೋಟಿ ಹಣ ಸೇಫ್‌​: ಕೇಂದ್ರ ಸಚಿವ ಸಿಂಧಿಯಾ - FRAUD CALLS BLOCKED

Fraud Calls Blocked: ಅಮಾಯಕರನ್ನು ವಂಚಿಸಿ ಹಣ ಲೂಟಿ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಹೊಸ ವ್ಯವಸ್ಥೆಯಿಂದ ಸಾವಿರಾರು ಕೋಟಿ ರೂ ರಕ್ಷಣೆಯಾಗುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

CENTRAL MINISTER  FRAUD CALLS  BSNL 5G SERVICE
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (IANS, X/@DoT_India)
author img

By ETV Bharat Tech Team

Published : Nov 12, 2024, 11:21 AM IST

Updated : Nov 12, 2024, 11:53 AM IST

Fraud Calls Blocked: ಅಮಾಯಕರ ಹಣ ಕಬಳಿಸುವ ಸೈಬರ್​ ಅಪರಾಧಿಗಳಿಗೆ ಸ್ಪ್ಯಾಮ್​ ಟ್ರ್ಯಾಕಿಂಗ್​ ಸಿಸ್ಟಮ್​ ಚಳ್ಳೆಹಣ್ಣು ತಿನ್ನಿಸುತ್ತಿದೆ. ಈ ಸಾಫ್ಟ್​ವೇರ್​ನಿಂದ ಅಂದಾಜು ಎರಡೂವರೆ ಸಾವಿರ ಕೋಟಿ ರೂ ಹಣವನ್ನು ರಕ್ಷಣೆ ಮಾಡಲಾಗಿದೆ​ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ತಂದಿರುವ 'ಸ್ಪ್ಯಾಮ್ ಟ್ರ್ಯಾಕಿಂಗ್ ಸಿಸ್ಟಮ್' ಮೂಲಕ ಪ್ರತಿದಿನ 1.35 ಕೋಟಿ ವಂಚನೆ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಇದುವರೆಗೆ 2,500 ಕೋಟಿ ರೂ ಮೌಲ್ಯದ ಆಸ್ತಿಯನ್ನು ಸೈಬರ್ ಅಪರಾಧಿಗಳಿಂದ ಉಳಿಸಲಾಗಿದೆ. ದೇಶದ ಹೊರಗಿನ ಸೇವೆಗಳಿಂದ ಹೆಚ್ಚಿನ ಸ್ಪ್ಯಾಮ್ ಕರೆಗಳು ಬರುತ್ತಿದ್ದು, ಈ ತಾಂತ್ರಿಕ ವ್ಯವಸ್ಥೆ ಅಂತಹ ಮೋಸದ ಕರೆಗಳನ್ನು ನಿರ್ಬಂಧಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಸಂವಹನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

ಸಂಚಾರ ಸಾಥಿ ಮತ್ತು ಚಕ್ಷು ಪೋರ್ಟಲ್ ಮೂಲಕ ದೂರಸಂಪರ್ಕ ಇಲಾಖೆ (ಡಿಒಟಿ) ವಂಚನೆ ಪತ್ತೆ ಜಾಲ 2,500 ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿದೆ. ಈ ವ್ಯವಸ್ಥೆಗಳೊಂದಿಗೆ ಸುಮಾರು 2.9 ಲಕ್ಷ ನಕಲಿ ಫೋನ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು ಸಂದೇಶಗಳನ್ನು ಕಳುಹಿಸಲು ಬಳಸುವ ಸುಮಾರು 1.8 ಮಿಲಿಯನ್ ಹೆಡರ್‌ಗಳನ್ನು ನಿರ್ಬಂಧಿಸಬಹುದು ಎಂದು ಅವರು ತಿಳಿಸಿದರು.

ಇವುಗಳ ಹೊರತಾಗಿ ಸರ್ಕಾರ ಮತ್ತೊಂದು ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಿದ್ದು, ಕಾನೂನು ಜಾರಿ ಸಂಸ್ಥೆಗಳೊಂದಿಗೆ ಬ್ಯಾಂಕ್‌ಗಳನ್ನು ಲಿಂಕ್ ಮಾಡಲಾಗುತ್ತಿದೆ. ಇದರಲ್ಲಿ 520 ಏಜೆನ್ಸಿಗಳನ್ನು ಸೇರಿಸಲಾಗಿದೆ ಎಂದು ಸಚಿವರು ಹೇಳಿದರು. ತಮ್ಮ ಆದ್ಯತೆಗಳನ್ನು ವಿವರಿಸುತ್ತಾ, ಮುಂದಿನ ವರ್ಷ ಮೇ ವೇಳೆಗೆ ಎಲ್ಲರಿಗೂ ಬಿಎಸ್​ಎನ್​ಎಲ್​ 5G ಸೇವೆ ಮತ್ತು ಏಪ್ರಿಲ್ ವೇಳೆಗೆ 4G ಸೇವೆಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಮತ್ತೊಂದು ಪ್ರಮುಖ ಗುರಿ ಎಂದು ಸಿಂಧಿಯಾ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್ 4ಜಿಗಾಗಿ ಒಂದು ಲಕ್ಷ ಬೇಸ್ ಸ್ಟೇಷನ್‌ಗಳ ಸ್ಥಾಪನೆಗೆ ಯೋಜಿಸಿದಂತೆ ಕೆಲಸ ನಡೆಯುತ್ತಿದೆ. ಇದರಲ್ಲಿ 50,000 ಟವರ್‌ಗಳು ಪೂರ್ಣಗೊಂಡಿವೆ. ಮುಂದಿನ ವರ್ಷದ ಏಪ್ರಿಲ್-ಮೇ ವೇಳೆಗೆ ಒಂದು ಲಕ್ಷ ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. ಅಷ್ಟೇ ಅಲ್ಲದೇ, ಸ್ವದೇಶಿ ಸೇವೆಗಳನ್ನು ಜಾರಿಗೆ ತಂದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೂ ಬಿಎಸ್‌ಎನ್‌ಎಲ್ ಪಾತ್ರವಾಗಲಿದೆ. ಅಲ್ಲಿಂದ 5ಜಿ ಅಳವಡಿಕೆಗೆ ಒತ್ತು ನೀಡುತ್ತೇವೆ ಎಂದರು.

ಈ ಸೈಟ್‌ಗಳನ್ನು 2025ರ ವೇಳೆಗೆ 5Gಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಹೆಚ್ಚುವರಿ ಟವರ್‌ಗಳನ್ನು ಸ್ಥಾಪಿಸಲು ಮತ್ತು ತಂತ್ರಜ್ಞಾನದ ಕೋರ್ ಅನ್ನು ಸ್ವಲ್ಪ ಬದಲಾಯಿಸಿದರೆ ಸಾಕು ಎಂದು ಸಿಂಧಿಯಾ ಹೇಳಿದರು. ಅಂದರೆ ಮುಂದಿನ ವರ್ಷ ಏಪ್ರಿಲ್-ಮೇ ವೇಳೆಗೆ BSNL 5G ಕೆಲವು ಪ್ರದೇಶಗಳಲ್ಲಿ ಜಾರಿಗೆ ಬರಬಹುದು.

ಬಿಎಸ್‌ಎನ್‌ಎಲ್ ಅನ್ನು ಉನ್ನತ ಟೆಲಿಕಾಂ ಕಂಪನಿಯನ್ನಾಗಿ ಮಾಡುವುದು ಸರ್ಕಾರದ ಗುರಿ. ಇದರ ಭಾಗವಾಗಿ ಮಾರುಕಟ್ಟೆ ಪಾಲು ಮತ್ತು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇಶಾದ್ಯಂತ 4G ಸಂಪರ್ಕವನ್ನು ಒದಗಿಸುವುದು ಮತ್ತೊಂದು ಗುರಿಯಾಗಿದೆ. ಭಾರತದಲ್ಲಿ ಇನ್ನೂ 37 ಸಾವಿರ ಹಳ್ಳಿಗಳು 4G ಸಂಪರ್ಕವನ್ನು ಹೊಂದಿಲ್ಲ. ಏಪ್ರಿಲ್ 2020 ರ ವೇಳೆಗೆ ಎಲ್ಲಾ ಪ್ರದೇಶಗಳಿಗೆ 4G ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

ಇದನ್ನೂ ಓದಿ: ಸೆಕ್ಯೂರಿಟಿ ವಿಷಯದಲ್ಲಿ ಐಫೋನ್​ ಫುಲ್​ ಸ್ಟ್ರಾಂಗು: ಕಳ್ಳರಿಗಷ್ಟೇ ಅಲ್ಲ, ಸರ್ಕಾರಕ್ಕೂ ತಲೆನೋವಾದ ಈ ಫೀಚರ್​!

Last Updated : Nov 12, 2024, 11:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.