ETV Bharat / state

ಗದಗ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಜನರಿಗೆ ಕೊರೊನಾ: 232ಕ್ಕೆ ಏರಿದ ಸೋಂಕಿತರ‌ ಸಂಖ್ಯೆ - ಕೊರೊನಾ ಪರಿಣಾಮ

ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಗದಗ ಜಿಲ್ಲೆಯಲ್ಲಿಂದು ಮತ್ತೆ ನಾಲ್ಕು ಜನ ಸೋಂಕಿತರು ಪತ್ತೆಯಾಗಿದ್ದಾರೆ.

four-corona-cases-found-in-gadag
ಗದಗ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಜನರಿಗೆ ಕೊರೊನಾ
author img

By

Published : Jul 7, 2020, 10:00 PM IST

ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ‌ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಕೋಲಾರಗಟ್ಟಿ ಗ್ರಾಮದ ನಿವಾಸಿ 3 ವರ್ಷದ ಹೆಣ್ಣು ಮಗುವಿಗೆ (ರೋಗಿ-25318), ಸಾರಿ ರೋಗ ಲಕ್ಷಣದಿಂದಾಗಿ ನಗರದ ಡಿಸಿ ಮಿಲ್ ನಿವಾಸಿ 53 ವರ್ಷದ ಮಹಿಳೆಗೆ (ರೋಗಿ-25320) ಸೋಂಕು ತಗುಲಿದೆ.

ಬೆಟಗೇರಿ 6ನೇ ಕ್ರಾಸ್ ಹೆಲ್ತ್​ ಕ್ಯಾಂಪ್ ನಿವಾಸಿ 75 ವರ್ಷದ ವೃದ್ಧನಿಗೆ (ರೋಗಿ-25321), ನರಗುಂದ ಪಟ್ಟಣದ ಹೊರಕೇರಿ ಓಣಿಯ 32 ವರ್ಷದ ಮಹಿಳೆಗೆ (ರೋಗಿ-25319) ಸೋಂಕು ತಗುಲಿರುವುದು ಖಚಿತವಾಗಿದ್ದು, ಸೋಂಕಿನ ಮೂಲ ಪತ್ತೆ ಕಾರ್ಯ ನಡೆದಿದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಇದೂವರೆಗೂ ಒಟ್ಟು ಸೋಂಕಿತರ ಪೈಕಿ 137 ಜನ ಗುಣಮುಖರಾಗಿದ್ದಾರೆ. ಸದ್ಯ 91 ಜನ ಸೋಂಕಿತರಿಗೆ ಚಿಕಿತ್ಸೆ ‌ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.