ಗದಗ: ಜಿಲ್ಲೆಯ ರೋಣ ತಾಲೂಕು ಪಂಚಾಯತ್ ಅಧ್ಯಕ್ಷೆಯಿಂದ ರೇಷ್ಮೆ ಇಲಾಖೆಯ ಅಧಿಕಾರಿಗೆ ಐದು ಸಾವಿರ ರೂಪಾಯಿ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು ಇದೀಗ ಆಡಿಯೋ ವೈರಲ್ ಆಗಿದೆ.
ಪ್ರೇಮವ್ವಾ ಅವರು ಅಧಿಕಾರಿಗೆ ಕರೆ ಮಾಡಿ, ನಾವು ನಿಮ್ಮ ಐದು ಸಾವಿರಕ್ಕಾಗಿ ಎಷ್ಟು ದಿನ ಕಾಯಬೇಕು? ನೀವು ಸಾಮಾನ್ಯ ಸಭೆ ಮುಗಿದ ನಂತ್ರ ಭೇಟಿಯಾಗುತ್ತೇನೆ ಅಂತೇಳಿ ಯಾಕೆ ಭೇಟಿಯಾಗಲಿಲ್ಲ? ಎಂದಿದ್ದಾರೆ. ಇನ್ನು ನನ್ನ ಸಂಬಳ ಆಗಿಲ್ಲ ಆದ ಮೇಲೆ ಹಣ ಕೊಡುವಾಗಿ ಅಧಿಕಾರಿ ಹೇಳಿದ್ರೆ, ನಿನ್ನ ಸಂಬಳದ ಹಣವನ್ನ ನಾನು ಕೇಳ್ತಾಯಿಲ್ಲಾ ಎಂದಿದ್ದಾರೆ.
ಸಾಮಾನ್ಯ ಸಭೆ ಮುಗಿದ ನಂತ್ರ ಭೇಟಿಯಾಗುತ್ತೇನೆ ಅಂತೇಳಿ ಯಾಕೆ ಭೇಟಿಯಾಗಲಿಲ್ಲ, ನಾನು ಆಫೀಸ್ನ್ನಲ್ಲೇ ಕುಳಿತಿದ್ದೇನೆ, ನೀವು ಎಲ್ಲಿಲ್ಲೆ ಕೆಲಸ ಮಾಡುತ್ತಿರೋ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ. ನಿಮ್ಮ ಹಣವನ್ನು ನಾನು ಕೇಳ್ತಾಯಿಲ್ಲಾ, ನೀವು ನಾಳೆ ಮೀಟಿಂಗ್ಗೆ ಬನ್ನಿ ಎಂದಿರುವ ಆಡಿಯೋ ವೈರಲ್ ಆಗುತ್ತಿದೆ.