ಗದಗ: ಮೊದಲ ಹಂತದಲ್ಲಿ ನಿರ್ಮಾಣವಾದ ಆಶ್ರಯ ಮನೆಗಳನ್ನು ಪ್ರಥಮವಾಗಿ ಗುಡಿಸಲು ವಾಸಿಗಳಿಗೆ ನೀಡಲಾಗುವುದು ಎಂದು ಶಾಸಕ ಹೆಚ್ ಕೆ ಪಾಟೀಲ್ ಹೇಳಿದರು.
ಇಂದು ನಗರದ ಗಂಗಿಮಡಿ ಬಡಾವಣೆಯ 3630 ಆಶ್ರಯ ಮನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಬಳಿಕ ಆಶ್ರಯ ಮನೆಗಳನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಫಿನಿಶಿಂಗ್ ಹೊರತುಪಡಿಸಿ, ಇಲ್ಲಿಯವರೆಗೆ 412 ಮನೆಗಳು ಪೂರ್ಣಗೊಂಡಿವೆ. 1500 ಮನೆಗಳು ಪ್ಲಿಂತ್ವರೆಗೆ ಬಂದಿವೆ. ಇನ್ನು ಮೂರು ತಿಂಗಳಲ್ಲಿ ಕನಿಷ್ಠ 500 ಮನೆಗಳನ್ನಾದರೂ ಒಂದು ವರ್ಷಕ್ಕಿಂತ ಹೆಚ್ಚು ವಾಸವಿರುವ ಗುಡಿಸಲು ನಿವಾಸಿಗಳಿಗೆ ನೀಡಲಾಗುವುದು. ಮೂಲಭೂತ ಸೌಲಭ್ಯಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.