ಗದಗ: ತಾಲೂಕಿನ ಮುಳಗುಂದ ಸಮೀಪದ ಶೀತಾಲಹರಿ ಗ್ರಾಮದ ಹೊರವಲಯದ ಶೆಡ್ವೊಂದರ ಮೇಲೆ ಸಿಪಿಐ ರವಿಕುಮಾರ್ ಕಪ್ಪತ್ತ ಅವರ ನೇತೃತ್ವದ ತಂಡ ದಾಳಿ ನಡೆಸಿ, ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಸೇರಿದಂತೆ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ಶೀತಾಲಹರಿ ವ್ತಾಪ್ತಿಯಲ್ಲಿ 10ಕ್ಕೂ ಹೆಚ್ಚು ಕ್ರಷರ್ಗಳಿದ್ದು ಸುತ್ತಮುತ್ತಲ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತದೆ. ಕಲ್ಲಿನ ಗುಡ್ಡಗಳನ್ನು ಸ್ಫೋಟಿಸಲು ಪರವಾನಿಗೆ ಇಲ್ಲದೇ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ 625 ಎಲೆಕ್ಟ್ರಿಕ್ ಡೆಟೋನೇಟರ್, 214 ಜೆಲಿಟಿನ್ ಟ್ಯೂಬ್, 10 ಕೆ.ಜಿ ಅಮೋನಿಯಂ ನೈಟ್ರೇಟ್ ಮತ್ತು 3 ಮೆಗ್ಗರ್ ಬಾಕ್ಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಹನುಮಂತಪ್ಪ ಯರೆವಡ್ಡರ (28) ನನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ.