ETV Bharat / state

ಬೆಟಗೇರಿ ಶಾವಿ ಕುಟುಂಬಕ್ಕೆ ಸಚಿವ ಸಿ ಸಿ ಪಾಟೀಲ ನೆರವು.. ಇದು ಈಟಿವಿ ಭಾರತ ಇಂಪ್ಯಾಕ್ಟ್‌!! - ಬೆಟಗೇರಿಯ ಶಾವಿ ಸಹೋದರಿಯರು

ಪ್ರಶಾಂತ್ ನಾಯ್ಕರ್ ಜತೆಗೆ ಅನಿಲ್​ ಅಬ್ಬಿಗೇರಿ ಸೇರಿ ಕೆಲ ಮುಖಂಡರು ಬೆಟಗೇರಿಯ ಶಾವಿ ಅವರ ಮನೆಗೆ ಭೇಟಿ ಒಂದು ತಿಂಗಳಿಗಾಗುವಷ್ಟು ರೇಷನ್​ ಮತ್ತು ತಂದೆಯ ಅನಾರೋಗ್ಯಕ್ಕೆ ಬೇಕಾಗುವ ಮಾತ್ರೆಗಳನ್ನು ಕೊಟ್ಟು, ಯಾವುದೇ ಸಂದರ್ಭದಲ್ಲಿ ಸಮಸ್ಯೆ ಬಂದರೆ ತಮಗೆ ಫೋನ್​ ಮಾಡಿ ಸಾಕು, ಸಹಾಯ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.

Shavi family
ಶಾವಿ ಕುಟುಂಬ
author img

By

Published : Apr 29, 2020, 8:38 PM IST

Updated : May 1, 2020, 10:10 AM IST

ಗದಗ : ಎರಡು ದಿನಗಳ ಹಿಂದೆ ಗದಗನ ಬೆಟಗೇರಿಯ ಶಾವಿ ಸಹೋದರಿಯರ ಜೀವನ ಹಾಗೂ ತಂದೆಗೆ ಪಾರ್ಶವಾಯು ಕಾಯಿಲೆಯ ಮಾತ್ರೆಗಳಿಗೂ ಗತಿ ಇಲ್ಲದ ಕುಟುಂಬದ ಕರುಣಾಜನಕ ಕಥೆ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. 'ಪಾರ್ಶ್ವವಾಯುನಿಂದ ಬಳಲುತ್ತಿರುವ ತಂದೆ, ಕುಟುಂಬಕ್ಕೀಗ ಹೆಣ್ಣುಮಕ್ಕಳೇ ಆಧಾರ' ಎಂಬ ಶೀರ್ಷಿಕೆಯಡಿ ಪ್ರತ್ಯಕ್ಷ ವರದಿ ಮಾಡಿ ಬೆಳಕು ಚೆಲ್ಲಿತ್ತು. ಇದನ್ನ ನೋಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ, ಆ ಬಡ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ಒದಗಿಸಲು ನಿರ್ಧರಿಸಿದ್ದಾರೆ.

ಬೆಟಗೇರಿ ಶಾವಿ ಕುಟುಂಬಕ್ಕೆ ಸಹಾಯ ಮಾಡಿದ ಸಚಿವ ಸಿ. ಸಿ. ಪಾಟೀಲ

ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ನೋಡಿ ಗದಗ ಬಿಜೆಪಿ ಮುಖಂಡ ಪ್ರಶಾಂತ್ ನಾಯ್ಕರ್​ ಅವರಿಗೆ ಸೂಚನೆ ನೀಡಿ ಆ ಕುಟುಂಬದ ತೊಂದರೆ ಹೋಗಲಾಡಿಸೋ ನಿಟ್ಟಿನಲ್ಲಿ ಎಷ್ಟೇ ಹಣದ ಖರ್ಚಾದರೂ ಅದನ್ನ ಭರಿಸೋದಾಗಿ ಹೇಳಿದ್ದರು. ಅವರ ಮನೆಗೆ ಹೋಗಿ ಅವರ ಸಮಸ್ಯೆ ಬಗೆಹರಿಸಲು ಸಚಿವರು ಸೂಚಿಸಿದ್ದರು.

ಪ್ರಶಾಂತ್ ನಾಯ್ಕರ್ ಜತೆಗೆ ಅನಿಲ್​ ಅಬ್ಬಿಗೇರಿ ಸೇರಿ ಕೆಲ ಮುಖಂಡರು ಬೆಟಗೇರಿಯ ಶಾವಿ ಅವರ ಮನೆಗೆ ಭೇಟಿ ಒಂದು ತಿಂಗಳಿಗಾಗುವಷ್ಟು ರೇಷನ್​ ಮತ್ತು ತಂದೆಯ ಅನಾರೋಗ್ಯಕ್ಕೆ ಬೇಕಾಗುವ ಮಾತ್ರೆಗಳನ್ನು ಕೊಟ್ಟು, ಯಾವುದೇ ಸಂದರ್ಭದಲ್ಲಿ ಸಮಸ್ಯೆ ಬಂದರೆ ತಮಗೆ ಫೋನ್​ ಮಾಡಿ ಸಾಕು, ಸಹಾಯ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ ಶಾವಿ ಕುಟುಂಬಕ್ಕೆ ಹಣ ಕೊಡಲು ಹೋದಾಗ ದಯವಿಟ್ಟು ನಮಗೆ ಹಣ ಬೇಡ ಮಾತ್ರೆಗಳನ್ನು ಮಾತ್ರ ನೀಡಿ ಎಂದು ಹೇಳಿದ ಕುಟುಂಬದ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಪ್ರಶಾಂತ್‌ ನಾಯ್ಕರ್‌. ಜತೆಗೆ ಈಟಿವಿ ಭಾರತ ಕಾಳಜಿಗೂ ಶ್ಲಾಘಿಸಿದ್ದಾರೆ.

Last Updated : May 1, 2020, 10:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.