ETV Bharat / state

ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ಗದಗ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಮೆಚ್ಚುಗೆ - ಮೃತಪಟ್ಟ ಗರ್ಭಿಣಿ ಹೊಟ್ಟೆಯಲ್ಲಿ ಜೀವಂತ ಮಗು

ಮೂರ್ಛೆರೋಗ ಸಮಸ್ಯೆಯಿಂದ ಮೃತಪಟ್ಟಿದ್ದ ತುಂಬು ಗರ್ಭಿಣಿಯ ಹೊಟ್ಟೆಯಲ್ಲಿದ್ದ ಜೀವಂತ ಮಗುವನ್ನು ಆಪರೇಷನ್‌ ಮೂಲಕ ವೈದ್ಯರು ಹೊರತೆಗೆದಿರುವ ಘಟನೆ ಗದಗದಲ್ಲಿ ನಡೆಯಿತು.

doctors removed the baby from the womb of the pregnant woman who had died in Gadag
ಗದಗ: ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ಸರ್ಕಾರಿ ವೈದ್ಯರ ಸಾಹಸಕ್ಕೆ ಜನ ಮೆಚ್ಚುಗೆ
author img

By

Published : Nov 11, 2021, 6:31 PM IST

Updated : Nov 11, 2021, 7:16 PM IST

ಗದಗ: ಮೃತಪಟ್ಟಿದ್ದ ಗರ್ಭಿಣಿಯ ಗರ್ಭದಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೀವಂತವಾಗಿ ಮಗುವನ್ನು ಹೊರತೆಗೆದಿರುವ ಘಟನೆ ನಗರದ ಹೃದಯಭಾಗದಲ್ಲೇ ಇರುವ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ನಡೆಯಿತು. ವೈದ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ಗರ್ಭಿಣಿಗೆ ಇದೇ 4ರಂದು ಹೆರಿಗೆಯಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಆಕೆಗೆ ಹೆರಿಗೆ ನೋವು ಬಾರದೆ ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರಂತೆ. ಎಲ್ಲಾ ಆಸ್ಪತ್ರೆಗಳನ್ನೂ ಅಲೆದಾಡಿ ಬಳಿಕ ಗದಗ ನಗರದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅನ್ನಪೂರ್ಣ ಮೃತಪಟ್ಟಿದ್ದಾರೆ.

ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆರೋಗ್ಯವನ್ನು ಪರಿಶೀಲನೆ ಮಾಡಿದಾಗ ಉಸಿರಾಟ ನಿಂತುಹೋಗಿತ್ತು. ಆದ್ರೆ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹೃದಯಬಡಿತ ಇನ್ನೂ ಬಡಿದುಕೊಳ್ಳುತ್ತಿತ್ತಂತೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಮಗುವನ್ನಾದರೂ ಬದುಕಿಸಬಹುದು ಅಂತ ಹತ್ತೇ ನಿಮಿಷದೊಳಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲವೇ ನಿಮಿಷದಲ್ಲಿ ವೈದ್ಯರು ಮೃತ ಗರ್ಭಿಣಿಯ ಗರ್ಭದಲ್ಲಿದ್ದ ಮಗುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ.

'ಮಗುವನ್ನು ಚೆನ್ನಾಗಿ ಸಾಕಿ ಪತ್ನಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವೆ'

ಸದ್ಯ ಹೆಣ್ಣು ಮಗು ಜನನವಾಗಿದೆ. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ತಂದೆ ವೀರೇಶ್‌, 'ನನಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದು. ಮದುವೆಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ತುಂಬಾ ಪ್ರೀತಿ-ವಿಶ್ವಾಸದಿಂದ ಇದ್ವಿ. ಆದ್ರೀಗ ನನ್ನ ಒಂಟಿ ಮಾಡಿ ಪತ್ನಿ ಹೋಗಿದ್ದಾಳೆ. ಮಗುವನ್ನು ನಾನು ಚೆನ್ನಾಗಿ ಸಾಕಿ ಪತ್ನಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೇನೆ' ಎನ್ನುತ್ತಾ ಭಾವುಕರಾದರು.

ಹೆರಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಬಸನಗೌಡ ಕರಿಗೌಡರ ಮಾರ್ಗದರ್ಶನದಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಡಾ.ವಿನೋದ್, ಡಾ.ಜಯರಾಜ್, ಡಾ.ಸೃತಿ ಹಾಗೂ ಡಾ.ಕೀರ್ತನ್ ಅವರು ಈ ಅಪರೂಪದ ಕಾರ್ಯದಲ್ಲಿ ಭಾಗವಹಿಸಿದ್ದರು.

Last Updated : Nov 11, 2021, 7:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.