ಗದಗ: ವೈದ್ಯೆಗೆ ಕೊರೊನಾ ಸೋಂಕು ತಗುಲಿದ ಕಾರಣ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎನ್.ಬಿ.ಪಾಟೀಲ್ಖಾಸಗಿ ಆಸ್ಪತ್ರೆಯನ್ನು ಸ್ವಯಂ ಪ್ರೇರಿತವಾಗಿ ಆಡಳಿತ ಮಂಡಳಿ 10 ದಿನಗಳ ಕಾಲ ಸೀಲ್‌ಡೌನ್ ಮಾಡಿಕೊಂಡಿದೆ.
ರೋಣ ತಾಲೂಕಿನ ಸೋಂಕಿತ ವೃದ್ಧೆಗೆ ಈ ವೈದ್ಯೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ. ಆ ವೃದ್ಧೆಯ ಸಂಪರ್ಕದಿಂದ ವೈದ್ಯೆಗೆ ವೈರಸ್ ಹರಡಿದೆ. ಮುಂಜಾಗ್ರತಾ ಕ್ರಮವಾಗಿ ಹತ್ತು ದಿನಗಳ ಕಾಲ ನಾವೇ ಸೀಲ್‌ಡೌನ್ ಮಾಡಿಕೊಂಡಿದ್ದೇವೆ ಎಂದು ಆಡಳಿತ ಮಂಡಳಿಯ ಡಾ.ಪವನ್ ಪಾಟೀಲ್ ಹೇಳಿದ್ದಾರೆ.