ಗದಗ: ಮತ್ತೆ ಲಾಕ್ಡೌನ್ ಆಗಬಹುದು ಎಂದು ಗದಗ ಜಿಲ್ಲೆಯಲ್ಲಿ ಮದ್ಯ ಪ್ರಿಯರು ಮದ್ಯವನ್ನು ಸ್ಟಾಕ್ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹಾಗಾಗಿ ಮೂರೇ ದಿನದಲ್ಲಿ ದಾಖಲೆಯ 8.69 ಕೋಟಿ ರೂ. ಮೌಲ್ಯದ ಮದ್ಯವು ಕೆವಿಬಿಸಿಎಲ್ನಿಂದ ರಿಟೇಲ್ ಅಂಗಡಿಗೆ ಮಾರಾಟವಾಗಿದೆ. 41 ದಿನಗಳ ಕಾಲ ಲಾಕ್ಡೌನ್ನಿಂದಾಗಿ ಎಣ್ಣೆ ಪ್ರಿಯರು ಎಣ್ಣೆ ಇಲ್ಲದೆ ಪರದಾಡಿ ಸುಸ್ತಾಗಿದ್ದರು. ಯಾವಾಗ ಲಾಕ್ಡೌನ್ ತೆರವುವಾಗುತ್ತೋ ಎಣ್ಣೆ ಯಾವಾಗ ಸಿಗುತ್ತೋ ಅಂತ ಕಾಯ್ತಿದ್ದ ಟೈಂನಲ್ಲಿ ಮೇ. 4ರಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಇದೀಗ ಗದಗದಲ್ಲಿ ಕಳೆದ ಮೂರೇ ದಿನದಲ್ಲಿ ಅಂದ್ರೆ ಮೇ. 5ರಿಂದ 7ರವರೆಗೆ ಒಟ್ಟು 8.69 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಒಟ್ಟು ಮೂರು ದಿನಗಳಲ್ಲಿ ಐಎಂಎಲ್ 19,350 ಲೀಟರ್ ಮಾರಾಟವಾಗಿ, ಒಟ್ಟು 8,06,77,338 ರೂ. ಆದಾಯ ಬಂದಿದೆ. ಇನ್ನು 62,36,350 ರೂ. ಮೌಲ್ಯದ 3,424 ಲೀಟರ್ ಬಿಯರ್ ಮಾರಾಟವಾಗಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಗದಗ ಅಬಕಾರಿ ಡಿಸಿ ಮೋತಿಲಾಲ್, ನಮಗೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಅದ್ರೆ ಮಾರಾಟ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.