ETV Bharat / state

ನಿರಂತರ ಮಳೆಗೆ ಬರದ ನಾಡಿನಲ್ಲಿ ಜಲಪಾತ ಸೃಷ್ಟಿ... ನೋಡಬನ್ನಿ ಕಾಲಕಾಲೇಶ್ವರ ಬೆಟ್ಟ - ಗದಗ ಜಿಲ್ಲೆಯ ಎಸ್. ಗಜೇಂದ್ರಗಡ

ಪ್ರವಾಸಿಗರು ಬೈಕ್ ಹಾಗೂ ಕಾರುಗಳಲ್ಲಿ ಕುಟುಂಬ ಸಮೇತವಾಗಿ ಬಂದು ಸೌಂದರ್ಯವನ್ನು ಸವಿಯುತ್ತಿದ್ದಾರೆ. ಕಾಲಕಾಲೇಶ್ವರ ಬೆಟ್ಟವನ್ನು ಏರಿ ಮೇಲ್ಬಾಗದಲ್ಲಿ ಧುಮ್ಮಿಕ್ಕುವ ಕಿರು ಜಲಪಾತದ ಕೆಳಗೆ ಸ್ನಾನ ಮಾಡಿ ಖಷಿ ಪಡುತ್ತಿದ್ದಾರೆ.

creation-falls-of-historical-kalakaleshwar-hill-gajendragad-taluk
ನಿರಂತರ ಮಳೆಗೆ ಬರದ ನಾಡಿನಲ್ಲಿ ಸೃಷ್ಟಿಯಾದ ಜಲಪಾತ, ನೋಡಬನ್ನಿ ಕಾಲಕಾಲೇಶ್ವರ ಬೆಟ್ಟ
author img

By

Published : Oct 4, 2020, 3:55 PM IST

ಗದಗ: ಅದು ಬರದ ನಾಡಿನ ಐತಿಹಾಸಿಕ ಕಾಲಕಾಲೇಶ್ವರ ಗುಡ್ಡ. ಅಲ್ಲಿ ಈಗ ನಿಸರ್ಗ ಸೌಂದರ್ಯ ಸೃಷ್ಟಿಯಾಗಿದೆ. ಹಸಿರ ಕಾನನದಲ್ಲಿ ಫಾಲ್ಸ್ ಗಳು ಉದ್ಭವವಾಗಿದೆ. ಇಲ್ಲಿ ಝುಳು ಝುಳು ನಾದದ ಇಂಪು ಮನಸ್ಸಿಗೆ ಮುದ ನೀಡುತ್ತಿದೆ. ಹೀಗಾಗಿ ಅಲ್ಲಿ ಯುವಕರ‌ ಹಿಂಡು ಹಾಲಿನ‌ ನೊರೆಯಂತೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಫುಲ್ ಎಂಜಾಯ್ ಮಾಡ್ತಿದ್ದಾರೆ. ತಮ್ಮೂರಲ್ಲೇ ಜೋಗ್ ಫಾಲ್ಸ್ ಅನುಭವ ಪಡೆಯುತ್ತಿದ್ದಾರೆ.

ನಿರಂತರ ಮಳೆಗೆ ಬರದ ನಾಡಿನಲ್ಲಿ ಸೃಷ್ಟಿಯಾದ ಜಲಪಾತ, ನೋಡಬನ್ನಿ ಕಾಲಕಾಲೇಶ್ವರ ಬೆಟ್ಟ

ಗದಗ ಜಿಲ್ಲೆಯ ಎಸ್. ಗಜೇಂದ್ರಗಡ ತಾಲೂಕಿನ ಐತಿಹಾಸಿಕ ಕಾಲಕಾಲೇಶ್ವರ ಗುಡ್ಡ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ‌ಕಳೆದ 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ. ಈ ಮಳೆಗೆ ಗುಡ್ಡದ ಕೆಲವೆಡೆ ಕಿರು ಜಲಪಾತಗಳು ಸೃಷ್ಟಿಯಾಗಿವೆ. ಹಚ್ಚ ಹಸಿರಿನ ನಡುವೆ ಹಾಲಿನ‌ ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುತ್ತಿದೆ. ಕಾಲಕಾಲೇಶ್ವರ ಬೆಟ್ಟ ನೋಡೋದು ಅಂದ್ರೆ ಪ್ರಕೃತಿ ಪ್ರಿಯರಿಗೆ ಸಂತಸ.

ಕಿರು ಜಲಪಾತದಿಂದ ಹರಿದು ಬರುವ ಝುಳು ಝುಳು ನೀರಿನ ನಯನ ಮನೋಹರ ದೃಶ್ಯ ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಖುಷಿ ಪಡ್ತಾರೆ. ಬೈಕ್ ಹಾಗೂ ಕಾರುಗಳಲ್ಲಿ ಕುಟುಂಬ ಸಮೇತವಾಗಿ ಬಂದು ಸೌಂದರ್ಯವನ್ನು ಸವಿಯುತ್ತಿದ್ದಾರೆ. ಬೆಟ್ಟವನ್ನು ಏರಿ ಮೇಲ್ಬಾಗದಲ್ಲಿ ಧುಮ್ಮಿಕ್ಕುವ ಕಿರು ಜಲಪಾತದ ಕೆಳಗೆ ಸ್ನಾನ ಮಾಡಿ ಖುಷಿ ಪಡ್ತಾಯಿದ್ದಾರೆ. ಮರುಭೂಮಿಯಲ್ಲಿ ಸಿಗುವ ಓಯಾಸಿಸ್​ನಂತೆ, ಬರದನಾಡಿನಲ್ಲಿ ಕಿರು ಜಲಪಾತ ಸಿಕ್ಕಿದ್ದು ಈ ಭಾಗದ ಜನರಿಗೆ ಸಂತಸವನ್ನು ಇಮ್ಮಡಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.