ETV Bharat / state

ಕೊರೊನಾ ಬಂದ್ರೂ ಡೋಂಟ್ ಕೇರ್... ಕೋವಿಡ್ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಜಿಮ್ಸ್ ಸಿಬ್ಬಂದಿ - ಕೊರೊನಾ ಪಾಸಿಟಿವ್

ಗದಗ ಜಿಮ್ಸ್​ನ ಸಿಬ್ಬಂದಿ ಕೊರೊನಾ ಪಾಸಿಟಿವ್ ಬಂದರೂ ಡೋಂಟ್ ಕೇರ್ ಅಂದಿದ್ದಾರೆ. ಹಲವು ರೋಗಿಗಳಿಗೆ ಚಿಕಿತ್ಸೆ ಕೊಟ್ಟು ತಾವು ಸಹ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ರೂ ಧೃತಿಗೆಡದೆ ನಾವು ಆರಾಮಾಗ್ತಿವಿ ಅನ್ನೋ ಮನೋಸ್ಥೈರ್ಯ ಹೊಂದಿದ್ದಾರೆ. ಅಲ್ಲದೆ, ಕೋವಿಡ್​ ಕೇಂದ್ರದಲ್ಲೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

dance
dance
author img

By

Published : Jul 23, 2020, 12:53 PM IST

ಗದಗ: ಕೊರೊನಾ ಪಾಸಿಟಿವ್ ಬಂದ್ರೂ ಧೃತಿಗೆಟ್ಟಿಲ್ಲ ಇಲ್ಲಿನ ಜಿಮ್ಸ್​ ಕೋವಿಡ್​ ಆಸ್ಪತ್ರೆಯ ಸಿಬ್ಬಂದಿ. ಯಾವುದಕ್ಕೂ ಭಯಪಡದೆ, ಇಬ್ಬರು ಕೊರೊನಾ ವಾರಿಯರ್ಸ್ ನೃತ್ಯ ಮಾಡಿದ್ದಾರೆ.

ಕೊರೊನಾ ಸೋಂಕು ತಗುಲಿದರೆ ಅದು ದಿಢೀರ್ ಕೊಲ್ಲುವುದಿಲ್ಲ. ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಬಹುದು ಎಂದು ಕೊರೊನಾ ಭಯ ಮುಕ್ತ ವಾತಾವರಣ ನಿರ್ಮಾಣಕ್ಕೆ ಸಾಕಷ್ಟು ವೈದ್ಯರು, ವೈದ್ಯಕೀಯೇತರ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಜಿಮ್ಸ್ ಸಿಬ್ಬಂದಿ

ಅದರ ಜೊತೆಗೆ ಜಿಮ್ಸ್​ನ ಸಿಬ್ಬಂದಿ ಕೊರೊನಾ ಪಾಸಿಟಿವ್ ಬಂದರೂ ಡೋಂಟ್ ಕೇರ್ ಅಂದಿದ್ದಾರೆ. ಕೊರೊನಾ ಭಯದ ವಾತಾವರಣದಲ್ಲಿ ಹಲವು ರೋಗಿಗಳಿಗೆ ಚಿಕಿತ್ಸೆ ಕೊಟ್ಟು ತಾವು ಸಹ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ರೂ ಧೃತಿಗೆಡದೆ ನಾವು ಆರಾಮಾಗ್ತಿವಿ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಡ್ಯಾನ್ಸ್ ಮಾಡುವ ಮೂಲಕ ಕೊರೊನಾ ರೋಗಿಗಳಿಗೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ.

ನಗರದ ಹೆರಿಗೆ ಆಸ್ಪತ್ರೆಯಲ್ಲಿ ಮೂವರು ಸಿಬ್ಬಂದಿ ಕಳೆದ 20 ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೆರಿಗೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಮೂವರು ಸಿಬ್ಬಂದಿಗೆ ಓರ್ವ ಗರ್ಭಿಣಿಯ ಸಂಪರ್ಕದಿಂದ ಸೋಂಕು ತಗುಲಿತ್ತು. ಹೀಗಾಗಿ ಅವರನ್ನ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಆದ್ರೆ ಅವರಿಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಸೋಂಕು ತಗುಲಿ 15 ದಿನ ಕಳೆದು ವರದಿ ನೆಗೆಟಿವ್ ಬರೋವರೆಗೂ ಯಾವುದೇ ತೊಂದರೆಯಾಗಿರಲಿಲ್ಲ. ಯಾವ ಲಕ್ಷಣಗಳು ಸಹ ಕಾಣಿಸಿರಲಿಲ್ಲ. ಆದ್ರೆ ಇಷ್ಟೆಲ್ಲಾ ನಾವು ಆರಾಮಾಗಿ ಇದ್ರುನೂ ನಮ್ಮ ಸಮಾಜ ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡ್ತಿದೆ. ನೋಡೋ ದೃಷ್ಟಿಕೋನ ಬೇರೆಯಾಗಿದೆ ಎಂದು ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.