ಗದಗ: ಲಾಕ್‌ಡೌನ್ ಹಿನ್ನೆಲೆ ನಗರದ ರಂಗನವಾಡ ಗಲ್ಲಿಯ ಜನರು ಅನ್ನ, ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಬೀದಿಗಿಳಿದು ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಕೊರೊನಾ ವೈರಸ್‌ನಿಂದ ವೃದ್ಧೆ ಸಾವನ್ನಪ್ಪಿದ ಪ್ರದೇಶ ರಂಗನವಾಡ ಗಲ್ಲಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. 5 ದಿನಗಳಿಂದ ಮನೆ ಬಿಟ್ಟು ಹೊರ ಬರದೆ ಜನ ಲಾಕ್ಡೌನ್ಗೆ ಸಹಕಾರ ಕೊಡ್ತಿದ್ದಾರೆ. ಆದರೆ, ತರಕಾರಿ, ದಿನಸಿ ವಸ್ತುಗಳಿಗೆ ಜನ ಪರದಾಟ ನಡೆಸುತ್ತಿದ್ದಾರೆ.
5ದಿನದಿಂದ ಮನೆಯ ಒಳಗೆ ಇದ್ದ ಮಹಿಳೆಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್, ಡಿಸಿ ಎಂ ಜಿ ಹಿರೇಮಠ ಉಚಿತ ದಿನಸಿ, ಹಾಲು, ತರಕಾರಿ ನೀಡುವ ಭರವಸೆ ನೀಡಿದ್ರು. ಆದರೆ, ಐದು ದಿನಗಳಿಂದ ಏನೂ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಜನ ಗೋಳಾಡ್ತಿದ್ದಾರೆ.
ಶೌಚಕ್ಕೂ ಸಹ ಪೊಲೀಸರು ಹೊರಗೆ ಬಿಡುತ್ತಿಲ್ಲ. ನಿಷೇಧಿತ ಪ್ರದೇಶವೆಂದು ಹೊರಗೂ ಕಳುಹಿಸುತ್ತಿಲ್ಲ. ನಮಗೆ ಅಗತ್ಯ ವಸ್ತುಗಳನ್ನೂ ಕೂಡ ತಲುಪಿಸುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.