ಗದಗ : ಗಾಂಧಿಜಿ ಮರಣದ ನಂತರ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಬುದ್ಧಿ ಜೀವಿಗಳು ರಾಷ್ಟ್ರಪಿತನ ನೆನಪಾರ್ಥವಾಗಿ ಅವರ ಚಿತಾಭಸ್ಮ ತಂದಿಟ್ಟು ಗದಗದ ಬೆಟಗೇರಿಯಲ್ಲಿ ಒಂದು ಸ್ಮಾರಕ ನಿರ್ಮಿಸಿಸಲು ಮುಂದಾದರು. ಆದ್ರೆ ರಾಜಕೀಯ ಹಲವು ಒಣ ಪ್ರತಿಷ್ಠೆಗಳಿಂದ ಗಾಂಧೀಜಿಯವರ ಗುಡಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ.
1944 ರಲ್ಲಿ ಮಹಾತ್ಮ ಗಾಂಧೀಜಿಯವರು ಗದಗಕ್ಕೆ ಬಂದಿದ್ದು, ಬೆಟಗೇರಿಯ ನೇಕಾರರ ಕಾಲೋನಿಗೆ ಭೇಟಿ ಕೊಟ್ಟಿದ್ದರು. ಇಲ್ಲಿ ಬೃಹತ್ ಜನಾಂದೋಲನ ಸಭೆ ಮಾಡಿ ಸಾಕಷ್ಟು ಜನರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿದ್ದರು. ಆದರೆ 24 ವರ್ಷವಾದ್ರೂ ಗಾಂಧೀಜಿಯ ಸಣ್ಣದೊಂದು ಗುಡಿ ನಿರ್ಮಾವಾಗದೇ ಇರುವುದು ಬೇಸರ ಸಂಗತಿ. ಸ್ಥಳೀಯ ನಗರಸಭೆ, ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸದಿರುವುದು ವಿಪರ್ಯಾಸ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿ ಗುಡಿ ಕಾಮಗಾರಿ ಅರ್ಧಕ್ಕೆ ನಿಂತು ಬರೋಬ್ಬರಿ 24 ವರ್ಷಗಳೇ ಕಳೆದಿವೆ. ಆದ್ರೆ ಬೆಟಗೇರಿ ಜನ ಮಾತ್ರ ಗಾಂಧಿ ಚೀತಾ ಭಸ್ಮಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ನಮ್ಮ ದುರಾದೃಷ್ಟವೆನೋ ಗೊತ್ತಿಲ್ಲ. ಇಲ್ಲಿ ಬರಿ ಕಲ್ಲಿಗೆ ಪೂಜೆ ಮಾಡುವ ಪರಿಸ್ಥಿತಿ ಬಂದು ಒದಗಿದೆ. ಈ ಭಾಗದಿಂದ ಶಾಲಾ - ಕಾಲೇಜಿಗೆ ಹೋಗುವ ಮಕ್ಕಳು ಇದಕ್ಕೆ ನಮಸ್ಕರಿಸಿಯೇ ಹೊಗ್ತಾರೆ. ಈ ಭಾಗದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ನೇಕಾರರು ನಿತ್ಯ ಈ ಗಾಂಧಿ ಗುಡಿಗೆ ನಮಸ್ಕರಿಸಿಯೇ ಮುನ್ನಡೆಯುತ್ತಾರೆ. ದೇಶ ಸೇವೆ ಮಾಡಿದ ರಾಷ್ಟ್ರಪಿತನ ಗುಡಿ ಗುಂಡಾಂತರವಾಗುತ್ತಿದೆ. ಆದ್ರೆ ಗಾಂಧೀಜಿ ತತ್ತ್ವ ಸಿದ್ಧಾಂತಗಳು ಉಳಿಯಬೇಕು. ಮುಂದಿನ ಪೀಳಿಗೆಗೆ ತಿಳಿಯಬೇಕು ಅಂದ್ರೆ ಶೀಘ್ರದಲ್ಲೇ ಈ ಗುಡಿ ನಿರ್ಮಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗಾಂಧಿ ಪ್ರತಿಮೆಯನ್ನು ನಗರಸಭೆಯಲ್ಲಿ ತಂದಿಟ್ಟು 10 ವರ್ಷಗಳು ಕಳೆದಿವೆ. ಆದ್ರೆ ಗಾಂಧಿಗುಡಿ ಜಿರ್ಣೋದ್ದಾರ ಮಾಡಿ ಪ್ರತಿಷ್ಠಾಪಿಸಲು ಮುಂದಾಗುತ್ತಿಲ್ಲ. ಇದಕ್ಕೆ ರಾಜಕೀಯವೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.