ಗದಗ: ಜಿಲ್ಲೆಯ ಶಿರಹಟ್ಟಿ ಬಳಿಯ ಹೊಳಲಾಪುರ ಕ್ರಾಸ್ ಹತ್ತಿರ ಬುಲೆರೋ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ನಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಅಶೋಕ್ ಪಾಟೀಲ (59) ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರಾಗಿದ್ದ ವಿರೂಪಾಕ್ಷಪ್ಪ ಬೂದಿಹಾಳ (46) ಮೃತರು ಎಂದು ಗುರುತಿಸಲಾಗಿದೆ.
ಕರ್ತವ್ಯ ಮುಗಿಸಿ ಶಿರಹಟ್ಟಿಯಿಂದ ಲಕ್ಷ್ಮೇಶ್ವರಕ್ಕೆ ಇಬ್ಬರು ತೆರಳುತ್ತಿದ್ದ ವೇಳೆ, ಈ ಅಪಘಾತ ಸಂಭವಿಸಿದೆ. ಬುಲೆರೋ ವಾಹನ ಶಿರಹಟ್ಟಿ ಕಡೆಗೆ ದಿನಸಿ ಪದಾರ್ಥಗಳನ್ನು ತುಂಬಿಕೊಂಡು ತೆರಳುತ್ತಿತ್ತು. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಬುಲೆರೋ ವಾಹನ ಚಾಲಕ ನಾಪತ್ತೆಯಾಗಿದ್ದಾನೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಶಿರಹಟ್ಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ