ETV Bharat / state

ಶಿರಹಟ್ಟಿ: ಬಂಡಾಯ ಅಭ್ಯರ್ಥಿ ಕಾಲಿಗೆ ನಮಸ್ಕರಿಸಿದ ಬಿಜೆಪಿ ಅಭ್ಯರ್ಥಿ

ಬಿಜೆಪಿ ನಾಯಕರ ಮನವೊಲಿಕೆಯಿಂದ ಶಿರಹಟ್ಟಿ ಕ್ಷೇತ್ರದಲ್ಲಿ ಬಂಡಾಯ ಶಮನಗೊಂಡಿದೆ.

BJP candidate bowed to rebel candidate feet
ಬಂಡಾಯ ಅಭ್ಯರ್ಥಿ ಕಾಲಿಗೆ ನಮಸ್ಕರಿಸಿದ ಬಿಜೆಪಿ ಅಭ್ಯರ್ಥಿ
author img

By

Published : Apr 25, 2023, 12:58 PM IST

Updated : Apr 25, 2023, 1:47 PM IST

ಬಂಡಾಯ ಅಭ್ಯರ್ಥಿ ಕಾಲಿಗೆ ನಮಸ್ಕರಿಸಿದ ಬಿಜೆಪಿ ಅಭ್ಯರ್ಥಿ

ಗದಗ: ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ಸೋಮವಾರ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ನಾಮಪತ್ರ ಹಿಂಪಡೆಯುತ್ತಿದ್ದಂತೆ ಅವರ ನಿವಾಸಕ್ಕೆ ಆಗಮಿಸಿದ ಶಿರಹಟ್ಟಿ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ಧನ್ಯವಾದ ಹೇಳುವ ಮೂಲಕ, ರಾಮಣ್ಣ ಲಮಾಣಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ರಾಮಣ್ಣ ಲಮಾಣಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಆದಿಯಾಗಿ ಜಿಲ್ಲಾ ನಾಯಕರಿಂದ ಮನವೊಲಿಕೆ ಮಾಡಿದ ಬಳಿಕ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿದ್ದ ಬಂಡಾಯ ಇದೀಗ ಶಮನಗೊಂಡಂತಾಗಿದೆ. ಚಂದ್ರು ಲಮಾಣಿ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸಿದ್ದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಾಗಿವೆ. ನೀನು ಕೂಡ ದೊಡ್ಡ ಮಟ್ಟದಲ್ಲಿ ಗೆದ್ದು ಬಾ ಎಂದು ಚಂದ್ರು ಲಮಾಣಿಗೆ ರಾಮಣ್ಣ ಲಮಾಣಿ ಆಶೀರ್ವದಿಸಿದರು.

ಇದನ್ನೂ ಓದಿ: ಮಂಗಳೂರು ಕ್ಷೇತ್ರದಲ್ಲಿ ಬೆದರಿಕೆ ಹಾಕಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ರು.. ಅಲ್ತಾಫ್​ ಕುಂಪಲ

Last Updated : Apr 25, 2023, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.