ಗದಗ : ಒಂದೆಡೆ ತರಕಾರಿ ಬೆಲೆಗಳು ಗಗನಕ್ಕೇರಿರುವುದು ರೈತರಿಗೆ ಸ್ವಲ್ಪ ಸಂತಸ ತಂದಿದೆ. ಜಿಲ್ಲೆಯಲ್ಲಿ ಬಾಳೆ ಬೆಳೆದ್ರೆ ಬಾಳು ಬಂಗಾರವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆ ಇಲ್ಲಿನ ಬಹುತೇಕ ರೈತರು ಬಾಳೆಕಾಯಿ ಬೆಳೆದಿದ್ದಾರೆ. ಆದ್ರೆ ಇದೀಗ ಬೆಲೆ ಪಾತಾಳಕ್ಕೆ ಕುಸಿದಿದ್ದು, ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ.
ಗದಗ ಜಿಲ್ಲೆಯಲ್ಲಿ ನೂರಾರು ಎಕರೆ ಬಾಳೆ ಬೆಳೆದಿದ್ದಾರೆ. ಈ ಬಾರಿ ಫಸಲು ಸಹ ಉತ್ತಮವಾಗಿದೆ. ಸದ್ಯಕ್ಕೆ ಬಾಳೆ ಕಟಾವಿಗೆ ಬಂದಿದ್ದು, ತೋಟದಲ್ಲಿ 50 ರಿಂದ 60 ಕೆ.ಜಿಯ ಬೃಹತ್ ಗಾತ್ರದ ಬಾಳೆಗೊನೆಗಳು ಕೊಳೆಯಲು ಪ್ರಾರಂಭಿಸಿವೆ. ಮಾರುಕಟ್ಟೆಯಲ್ಲಿ ಬಾಳೆ ಹಣ್ಣು ಡಜನ್ಗೆ 30-40 ರೂಪಾಯಿಗೆ ಮಾರಾಟವಾಗುತ್ತಿದೆ. ಆದ್ರೆ ನಾವು ಮಾರುಕಟ್ಟೆಗೆ ಬಾಳೆಕಾಯಿ ತಂದ್ರೆ ದಲ್ಲಾಳಿಗಳು ಕೆಜಿಗೆ 3-4 ರೂ. ಕೇಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಡತನ ಸೂಚ್ಯಂಕದ ವರದಿ ಪ್ರಕಟ: ಚಾಮರಾಜನಗರಕ್ಕೆ 10ನೇ ಸ್ಥಾನ
ಕೊರೊನಾದಿಂದ ಸಂಕಷ್ಟ ಅನುಭವಿಸಿ, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದ ನಮಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತು ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಿ ಬಂದು ರೈತರ ಸಮಸ್ಯೆ ಕೇಳುತ್ತಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಬಾಳೆ ಬೆಳೆಗೆ ಸೂಕ್ತ ಬೆಲೆ ಕೊಡಿಸಿ, ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಅನ್ನದಾತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೆಚ್.ಡಿ.ಕೋಟೆಯಲ್ಲಿ ಎರಡು ತಲೆ, ಮೂರು ಕಣ್ಣುಳ್ಳ ವಿಚಿತ್ರ ಕರು ಜನನ