ETV Bharat / state

ಮಲಪ್ರಭಾ ನದಿಗೆ ಕಂದನೊಂದಿಗೆ ತಾಯಿ ಜಿಗಿದಿದ್ದ 2 ದಿನಗಳ ಬಳಿಕ ಮಗುವಿನ ಶವ ಪತ್ತೆ

ಮಗುವಿನೊಂದಿಗೆ ತಾಯಿ ನದಿಗೆ ಹಾರಿದ್ದ ಪ್ರಕರಣದಲ್ಲಿ ಮಗುವಿನ ಮೃತದೇಹ ಎರಡು ದಿನಗಳ ಬಳಿಕ ಕೊನೆಗೂ ಪತ್ತೆಯಾಗಿದೆ.

baby dead body found in Malaprabha river
ಮಲಪ್ರಭಾ ನದಿಗೆ ಮಗುವಿನೊಂದಿಗೆ ತಾಯಿ ಹಾರಿದ್ದ ಪ್ರಕರಣ: ಮಗುವಿನ ಶವ ಪತ್ತೆ
author img

By

Published : Oct 1, 2021, 12:51 PM IST

ಗದಗ: ತಾಯಿ ತನ್ನ ಮಗುವಿನೊಂದಿಗೆ ನದಿಗೆ ಹಾರಿದ್ದ ಪ್ರಕರಣದಲ್ಲಿ ಎರಡು ದಿನದ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ ಬಳಿಕ ಮಗುವಿನ ಮೃತದೇಹವನ್ನು ಹೊರತೆಗೆಯಲಾಗಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ನಿವಾಸಿ ಉಮಾದೇವಿ ಶೆಲ್ಲಿಕೇರಿ ಮಕ್ಕಳ ಸಮೇತ ನದಿಗೆ ಹಾರುವ ವೇಳೆ ಇಬ್ಬರು ಮಕ್ಕಳು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಎರಡು ವರ್ಷದ ಮಗು ಶ್ರೇಷ್ಟಾ ಸಮೇತ ತಾಯಿ ಮಲಪ್ರಭಾ ನದಿಗೆ ಹಾರಿದ್ದಳು.

ಆದರೆ, ಅದೃಷ್ಟವಶಾತ್ ತಾಯಿ ಮುಳ್ಳಿನ ಪೊದೆಯೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಅಗ್ನಿಶಾಮಕ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದರು. ಈಗ ಮಗುವಿನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ, ಮಹಿಳೆಯ ಗ್ರಾಮ ಆಲೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ತಾಯಿ ಉಮಾದೇವಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಂಪೂರ್ಣ ಹುಚ್ಚು ಹಿಡಿದಿದೆ: ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.