ETV Bharat / state

ಲಿನೋವಾ ರಿಯಾಲಿಟಿಸ್ ಲೈಫ್​​ ಸ್ಟೋರಿಗೆ ಗದಗ ಯುವತಿ ಆಯ್ಕೆ - ಗದಗ ಲೆಟೆಸ್ಟ್ ನ್ಯೂಸ್

ಹಳ್ಳಿ ವಾತಾವರಣದಲ್ಲಿ ಯುವತಿಯರ ಶಿಕ್ಷಣ, ಭವಿಷ್ಯ ಹೇಗೆ ಕಮರಿ ಹೋಗುತ್ತೆ, ತಾನು ಬಡತನದ ಬೆಂಕಿಯಲ್ಲಿ ಹೇಗೆ ಅರಳಿ ಹೂವಾದೆ ಎಂಬುದನ್ನು ಕುರಗೋವಿನಕೊಪ್ಪ ಗ್ರಾಮದ ಅಶ್ವಿನಿ ದೊಡ್ಡಲಿಂಗನ್ನವರ ಬಿಂಬಿಸಿದ್ದಾಳೆ. ಈ ಸ್ಟೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು‌ ಮಾಡುತ್ತಿದೆ.

ashwini doddalingannavara
ಅಶ್ವಿನಿ ದೊಡ್ಡಲಿಂಗನ್ನವರ
author img

By

Published : Oct 13, 2020, 6:56 AM IST

ಗದಗ: ನರಗುಂದ ತಾಲೂಕಿನ ಕುರಗೋವಿನಕೊಪ್ಪ ಗ್ರಾಮದ ಅಶ್ವಿನಿ ದೊಡ್ಡಲಿಂಗನ್ನವರ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ. ಹೌದು, ಅಮೆರಿಕಾದ ಲಿನೋವಾ ಕಂಪನಿ ಆಯೋಜಿಸಿದ ನ್ಯೂ ರಿಯಾಲಿಟಿಸ್ ಲೈಫ್ ಸ್ಟೋರಿಗೆ ಆಯ್ಕೆಯಾದ ಹತ್ತು ದೇಶಗಳಲ್ಲಿ ಭಾರತದ ಏಕೈಕ ಯುವತಿ ‌ಅಶ್ವಿನಿ ದೊಡ್ಡಲಿಂಗನ್ನವರ ಆಯ್ಕೆಯಾಗಿದ್ದಾರೆ.

ಹೌದು, ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರೂ ಏನು ಬೇಕಾದರೂ ಸಾಧಿಸಬಹುದೆಂದು ಈಕೆ ತೋರಿಸಿಕೊಟ್ಟಿದ್ದಾಳೆ. ತನ್ನ ‌ಲೈಫ್ ಸ್ಟೋರಿಯನ್ನು ಮಾಡುವ ಮೂಲಕ ಇಡೀ ಜಗತ್ತಿನ ‌ಗಮನ ಸೆಳೆದಿದ್ದಾಳೆ.‌ ಹಳ್ಳಿ ವಾತಾವರಣದಲ್ಲಿ ಯುವತಿಯರ ಶಿಕ್ಷಣ, ಭವಿಷ್ಯ ಹೇಗೆ ಕಮರಿ ಹೋಗುತ್ತೆ, ತಾನು ಬಡತನದ ಬೆಂಕಿಯಲ್ಲಿ ಹೇಗೆ ಅರಳಿ ಹೂವಾದೆ ಎಂಬುದನ್ನು ಬಿಂಬಿಸಿದ್ದಾಳೆ. ಅಶ್ವಿನಿಯ ಈ ಸ್ಟೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು‌ ಮಾಡುತ್ತಿದೆ.

ashwini doddalingannavara family
ಅಶ್ವಿನಿ ದೊಡ್ಡಲಿಂಗನ್ನವರ ಅವರ ಕುಟುಂಬಸ್ಥರು

ಕಡು ಬಡತನದ ರೈತಾಪಿ ಕುಟುಂಬದಲ್ಲಿ ಹುಟ್ಟಿದ ಅಶ್ವಿನಿ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾಭ್ಯಾಸ ಮುಗಿಸಿದ್ದು ಗ್ರಾಮದ ಸರ್ಕಾರಿ ಶಾಲೆಯಲ್ಲಿ. ನಂತರ ನರಗುಂದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಯುಸಿ, ಬಿಎ ಪದವಿ ಪಡೆದರು. ಇಂಗ್ಲಿಷ್​ ವಿಷಯ ಅಂದರೆ ಅಷ್ಟಕ್ಕಷ್ಟೆ. ಭಾಷಣ, ವೇದಿಕೆ ಅಂದ್ರೆ ಭಯ. ಆದ್ರೆ ಇದೀಗ ಅಶ್ವಿನಿ ಶಿಕ್ಷಕರಿಗೆ ತರಬೇತಿ ನೀಡುವ ಮಟ್ಟಕ್ಕೆ ಬೆಳೆದಿದ್ದಾಳೆ.

ಮಾತನಾಡುವದಕ್ಕೂ ಭಯ ಪಡುವ ಅಶ್ವಿನಿ ಏನಾದರೂ ಸಾಧಿಸಬೇಕೆನ್ನುವ ಗುರಿ ಹೊಂದಿದ್ದು, ಸ್ಕಿಲ್ ಡೆವಲಪ್​​ಮೆಂಟ್​ ಕೋರ್ಸ್‌ ಈಕೆಯನ್ನು ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್​​​ನಲ್ಲಿ ಎರಡು ತಿಂಗಳ ಸ್ಕಿಲ್ ಡೆವಲಪ್​ಮೆಂಟ್​​​ ಕೋರ್ಸ್ ಮುಗಿಸಿದ್ದಾಳೆ. ಬಳಿಕ 2018ರಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಮೇಘ ಶಾಲಾ ಸಂಸ್ಥೆಗೆ ಆಯ್ಕೆಯಾಗಿದ್ದಾಳೆ. ಬೆಂಗಳೂರಿನಲ್ಲಿ ಶಾಲೆಗಳಿಗೆ ಹೋಗಿ ಟೆಕ್ನಾಲಜಿ ಬಳಸಿಕೊಂಡು ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಅಂತಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾಳೆ. ಅಲ್ಲಿ ಇರುವಾಗಲೇ ಲಿನೋವಾ ಕಂಪನಿ ಸ್ಟೋರಿಗೆ ಆಯ್ಕೆ ಆಗಿದ್ದಾಳೆ.

ಹಾಗಾಗಿ ಗ್ರಾಮದ ಮಗಳ ಈ ಸಾಧನೆಗೆ ಗ್ರಾಮಸ್ಥರು, ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಲಾಕ್​​ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಅಶ್ವಿನಿ ಈಗ ಮನೆಯಲ್ಲಿ ಹೆತ್ತವರಿಗೆ ಸಹಾಯ‌ ಮಾಡುತ್ತಿದ್ದಾಳೆ.‌ ಜೊತೆಗೆ ಆನ್​​ಲೈನ್ ಮೂಲಕ ಶಿಕ್ಷಕರಿಗೆ ಪಾಠ ಮಾಡುತ್ತಿದ್ದಾಳೆ. ತನ್ನ ಮದುವೆ ಮಾಡುವ ಯೋಚನೆ ಬಿಟ್ಟು, ಹೆಣ್ಣು ಮಕ್ಕಳಿಗೆ ಓದಲು, ಪ್ರತಿಭೆ ಹೊರಹಾಕಲು ಅವಕಾಶ ಕೊಡಿ ಅಂತಾ ಪಾಲಕರಿಗೆ ಮನವಿ ಮಾಡಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.