ETV Bharat / state

ಗದಗದಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ಗುಣಮುಖ - ಗದಗ ಸೋಂಕಿತ ವ್ಯಕ್ತಿ ಗುಣಮುಖ ಸುದ್ದಿ

ಸೋಂಕಿತ ಪಿ-514ನ ದ್ವಿತೀಯ ಸಂಪರ್ಕದಿಂದ ಏಪ್ರಿಲ್ 30ರಂದು ಪಿ-913ಅನ್ನು ಜಿಮ್ಸ್​ಗೆ ಸೇರಿಸಲಾಗಿತ್ತು. ಅವರ ಗಂಟಲು ದ್ರವದ ಮಾದರಿ ಪಾಸಿಟಿವ್ ಬಂದಿದ್ದರಿಂದ ಮೇ 10ರಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ಐಸೋಲೇಷನ್​ ವಾರ್ಡ್​ಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು.

Another Corona infected person released in Gadag
ಗದಗನಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖ
author img

By

Published : May 27, 2020, 3:29 PM IST

ಗದಗ: ನಿನ್ನೆ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಗಂಜಿ ಬಸವೇಶ್ವರ ವೃತ್ತದ ಪಿ-913, 65 ವರ್ಷದ ವ್ಯಕ್ತಿಗೆ ಮೇ. 24 ಮತ್ತು 25ರಂದು ಜಿಮ್ಸ್​​ನಲ್ಲಿ ಪರೀಕ್ಷಿಸಲಾಗಿದೆ. ಅವರು ಸೋಂಕು ಮುಕ್ತರಾಗಿ ಸಂಪೂರ್ಣ ಗುಣಮುರಾಗಿದ್ದು ಕಂಡು ಬಂದಿದ್ದರಿಂದ ಮೇ 26ರಂದು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್.ಭೂಸರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಂಕಿತ ಪಿ-514ನ ದ್ವಿತೀಯ ಸಂಪರ್ಕದಿಂದ ಏಪ್ರಿಲ್ 30ರಂದು ಪಿ-913ಅನ್ನು ಜಿಮ್ಸ್​​ಗೆ ಸೇರಿಸಲಾಗಿತ್ತು. ಅವರ ಗಂಟಲು ದ್ರವದ ಮಾದರಿ ಪಾಸಿಟಿವ್ ಬಂದಿದ್ದರಿಂದ ಮೇ 10ರಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.

ಜಿಮ್ಸ್​​​​ನಲ್ಲಿ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕಿಯಿಸಿದ್ದು ಗುಣಮುಖರಾಗಿದ್ದಾರೆ. ಹೀಗಾಗಿ ಮೇ 26ರಂದು ಅವರನ್ನು ಬಿಡುಗಡೆ ಮಾಡಿ, ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.