ETV Bharat / state

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಪಂ ಸದಸ್ಯ - ಗದಗನಲ್ಲಿ ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಸದಸ್ಯ

ಗದಗ ತಾಲೂಕಿನ ಹರ್ತಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಲದ್ದಿ ಎಂಬಾತ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ಗುತ್ತಿಗೆದಾರನಿಂದ ₹50 ಸಾವಿರ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ACB arrested a panchayat member for accepting a bribe
ಎಸಿಬಿ ಬಲೆಗೆ ಬಿದ್ದ ಗ್ರಾಪಂ ಸದಸ್ಯ
author img

By

Published : Mar 20, 2020, 5:07 PM IST

ಗದಗ: ಲಂಚ ಪಡೆಯುವ ವೇಳೆ ಗ್ರಾಮ ಪಂಚಾಯಿತಿ ಸದಸ್ಯನೋರ್ವ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗದಗನ ಖಾಸಗಿ ಹೋಟೆಲ್​ನಲ್ಲಿ ನಡೆದಿದೆ.

ಎಸಿಬಿ ಬಲೆಗೆ ಬಿದ್ದ ಗ್ರಾಪಂ ಸದಸ್ಯ

ತಾಲೂಕಿನ ಹರ್ತಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಲದ್ದಿ ಎಂಬುವವರು ಗುತ್ತಿಗೆದಾರನಿಂದ ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಖಾಸಗಿ ಹೋಟೆಲ್​ನಲ್ಲಿ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹರ್ತಿ ಗ್ರಾಮದ ದೇವಸ್ಥಾನ ಎದುರಿನ ತಡೆಗೋಡೆ ಕಾಮಗಾರಿ ಬಿಲ್ ವಿಷಯಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಎಸಿಬಿ ಡಿಎಸ್​​​ಪಿ ವಾಸುದೇವರಾಮ್, ಇನ್ಸ್​​​ಪೆಕ್ಟರ್ ಎ.ಎಸ್.ಗುದಿಗೊಪ್ಪ, ಹೆಚ್.ವಿಶ್ವನಾಥ ಹಾಗೂ ಸಿಬ್ಬಂದಿ ದಾಳಿ ವೇಳೆ ಭಾಗಿಯಾಗಿದ್ದರು. ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.