ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಗಾಗಿ ಜಿರೋ ಟ್ರಾಫಿಕ್ ಮಾಡಿದ ಪರಿಣಾಮ ಎರಡು ಆಂಬ್ಯುಲೆನ್ಸ್ಗಳು ಟ್ರಾಫಿಕ್ ಮಧ್ಯೆ ಸಿಲುಕಿ ಪರದಾಡಿದ ಘಟನೆ ವರೂರು ಬಳಿ ನಡೆಯಿತು.
ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮ ಶಿವಳ್ಳಿ ಪರ ವರೂರು ಗ್ರಾಮದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಮುಗಿಸಿ ಹುಬ್ಬಳ್ಳಿಗೆ ಆಗಮಿಸುವಾಗ ಸಿಎಂಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಸಿಎಂ ಜಿರೋ ಟ್ರಾಫಿಕ್ ಎಫೆಕ್ಟ್ ಆಂಬ್ಯುಲೆನ್ಸ್ಗೆ ತಟ್ಟಿತ್ತು. ವರೂರು ಬಳಿ ಸುಮಾರು 20 ನಿಮಿಷ ಎರಡು 108 ಆಂಬ್ಯುಲೆನ್ಸ್ಗಳು ರಸ್ತೆಯಲ್ಲಿ ಕಾಯುವಂತಾಯಿತು. ಇದರಿಂದಾಗಿ ಸಾರ್ವಜನಿಕರು ಹಾಗೂ ಆಂಬ್ಯುಲೆನ್ಸ್ನಲ್ಲಿರುವ ರೋಗಿಗಳು ಪರದಾಡುವಂತಾಯಿತು.