ETV Bharat / state

ಹು -ಧಾ ಮಹಾನಗರ ಪೊಲೀಸ್​​​​​​​ ಆಯುಕ್ತರ ಅಮಾನತಿಗೆ ಒತ್ತಾಯ: ಯುವ ವಕೀಲರ ಸಂಘ ಆಗ್ರಹ

ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಹು-ಧಾ ಮಹಾನಗರ ಪೊಲೀಸ್​​​ ಆಯುಕ್ತರು ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಯುವ ವಕೀಲರ ಸಂಘದಿಂದ ಇಂದು‌ ಕೋರ್ಟ್​ ಎದುರಗಡೆ ಪ್ರತಿಭಟನೆ ಮಾಡಲಾಯಿತು.

author img

By

Published : Feb 24, 2020, 3:25 PM IST

Hubli-dharwad city police commissioner
ಯುವ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹದ ಪ್ರಕರಣದಲ್ಲಿ ಹು - ಧಾ ಮಹಾನಗರ ಪೊಲೀಸ್​​​ ಆಯುಕ್ತರು ಮೃಧು ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ‌‌‌. ಕೂಡಲೇ ಪೊಲೀಸ್​​​ ಆಯುಕ್ತರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಯುವ ವಕೀಲರ ಸಂಘದಿಂದ ಇಂದು‌ ಕೋರ್ಟ್​ ಎದುರಗಡೆ ಪ್ರತಿಭಟನೆ ಮಾಡಲಾಯಿತು.

ಯುವ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ನಗರದಲ್ಲಿಂದು ಪ್ರತಿಭಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅನ್ವೇಕರ್, ದೇಶದ್ರೋಹದ ಪ್ರಕರಣದಲ್ಲಿ ಪೊಲೀಸ್​​​ ಆಯುಕ್ತರು ಮೃಧು ಧೋರಣೆ ಅನುಸರಿಸುವ ಮೂಲಕ ದೇಶದ್ರೋಹದ ಆರೋಪಿತರಿಗೆ ರಕ್ಷಣೆ ನೀಡಿರುವುದು ಖಂಡನೀಯವಾಗಿದೆ.

ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪೊಲೀಸ್​​ ಇಲಾಖೆಯ ನಡೆಯೇ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಹು-ಧಾ ಮಹಾನಗರ ಪೊಲೀಸ್​​​ ಆಯುಕ್ತರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.