ETV Bharat / state

ತಂದೆ ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಮಗ.. ಧಾರವಾಡದಲ್ಲಿ ವಿಚಿತ್ರ ಘಟನೆ - ಧಾರವಾಡ ಯುವಕ ಆಸ್ಪತ್ರೆಗೆ ದಾಖಲು

ಮೊಬೈಲ್ ಕರೆನ್ಸಿಗೆ ತಂದೆಯು ಹಣ ನೀಡಿಲ್ಲವೆಂದು ಕೋಪಗೊಂಡ ಮಗನೋರ್ವ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

youth-hospitalised-after-serious-injury-in-dharwad
ತಂದೆ ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಮಗ
author img

By

Published : May 11, 2022, 8:52 PM IST

ಹುಬ್ಬಳ್ಳಿ-ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಬೈಲ್ ಕರೆನ್ಸಿ ಹಾಕಿಸಿಕೊಳ್ಳಲು ತಂದೆ ಹಣ ನೀಡಿಲ್ಲವೆಂದು ಕೋಪಗೊಂಡ ಮಗನೋರ್ವ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿರುವ ವಿಚಿತ್ರ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯುವಕನೋರ್ವ ಕೇವಲ 6ನೇ ತರಗತಿ ಓದಿದ್ದು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಮಂಗಳವಾರ ಮೊಬೈಲ್​ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದಾಗಿ ಕೋಪಗೊಂಡ ಯುವಕ ಗೊರವಪ್ಪನ ವೇಷ ಹಾಕಿಕೊಂಡು ಮನೆಯ ಹತ್ತಿರ ದೇವಸ್ಥಾನಕ್ಕೆ ತೆರಳಿದ್ದಾನೆ.

ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಅಸ್ವಸ್ಥನಾಗಿ ಬಿದ್ದಿದ್ದಾನೆ ಎನ್ನಲಾಗ್ತಿದೆ. ಇದನ್ನು ಕಂಡ ಸ್ಥಳೀಯರು ಯುವಕನ ತಂದೆಗೆ ವಿಷಯ ತಿಳಿಸಿದ್ದಾರೆ. ಸದ್ಯ ಆತನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರಚಿಕಿತ್ಸೆ ಮೂಲಕ ತ್ರಿಶೂಲ ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ವರ್ಷದೊಳಗೇ ಮೊಮ್ಮಕ್ಕಳು ಬೇಕು.. ಇಲ್ಲವೇ ₹5 ಕೋಟಿ ಪರಿಹಾರ ಕೊಡಿ: ಸೊಸೆ - ಮಗನ ವಿರುದ್ಧ ವೃದ್ಧ ದಂಪತಿ ಕೋರ್ಟ್​ ಮೊರೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.