ETV Bharat / state

ಹುಬ್ಬಳ್ಳಿ: ಪ್ರತಿಭಾವಂತ ಯುವಕ ರೈಲಿಗೆ ತಲೆಕೊಟ್ಟು ಆತ್ಯಹತ್ಯೆ

ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಜಿಲ್ಲೆಯ ಸವಣೂರು‌ ತಾಲೂಕು ಯಲುವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಪ್ರತಿಭಾವಂತ ಯುವಕ ನೇಣಿಗೆ ಶರಣು
Youth committed suicide at Hubli
author img

By

Published : Jan 6, 2021, 1:31 PM IST

Updated : Jan 6, 2021, 2:33 PM IST

ಹುಬ್ಬಳ್ಳಿ: ರೈಲ್ವೆ ಹಳಿಗೆ ತಲೆಕೊಟ್ಟು ಪ್ರತಿಭಾವಂತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು‌ ತಾಲೂಕು ಯಲುವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಪ್ರತಿಭಾವಂತ ಯುವಕ ರೈಲಿಗೆ ತಲೆಕೊಟ್ಟು ಆತ್ಯಹತ್ಯೆ

ಮೃತ ಯುವಕನನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡಿರ್ ನಾಗನೂರು ಗ್ರಾಮದ ಅಡಿವೆಪ್ಪ ಹಾದಿಮನಿ (22) ಎಂದು ಗುರುತಿಸಲಾಗಿದೆ. ಅಡಿವೆಪ್ಪ ಮನೆಯಲ್ಲಿ ಮೂವರು ಮಕ್ಕಳಲ್ಲಿ ಈತನೇ ಹಿರಿಯ ಮಗನಾಗಿದ್ದು, ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ಮನೆಯ ಕಷ್ಟ ನಿವಾರಣೆಗಾಗಿ ಕಿಡ್ನಿ ದಾನ ಮಾಡಲು ಮುಂದಾಗಿದ್ದನು.

ಓದಿ: ಗೋಮಾಂಸ ಭಕ್ಷಣೆ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಪಕ್ಷದ್ದಲ್ಲ: ಡಿಕೆಶಿ ಸ್ಪಷ್ಟನೆ

ಇಷ್ಟಾದರೂ ಯಾವುದೇ ಸಮಸ್ಯೆ ಬಗೆಹರಿಯದಿದ್ದಾಗ ಮಾನಸಿಕವಾಗಿ ನೊಂದ ಯುವಕ, ಡೆತ್​ನೋಟ್​ ಬರೆದಿಟ್ಟು ರೈಲಿಗೆ ತಲೆಕೊಟ್ಟಿದ್ದಾನೆ. ಈತ ಪಿಯುಸಿಯಲ್ಲಿ ಶೇ 96 ಅಂಕ ಪಡೆದಿದ್ದನು. ಅದಲ್ಲದೆ ಬಿಎಸ್ಸಿಸಿ ಬಾಹ್ಯ ವ್ಯಾಸಂಗ ಮಾಡುತ್ತಿದ್ದು, ಮನೆಯ ನಿರ್ವಹಣೆಗೆ ದಾವಣಗೆರೆಯಲ್ಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗುತ್ತಿದೆ.

ಈ ಸಂಬಂಧ ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 6, 2021, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.