ಹುಬ್ಬಳ್ಳಿ: ತಾಯಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮನನೊಂದು ಮಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯ ಗಣೇಶಪೇಟೆಯ ಕುಲಕರ್ಣಿ ಹಕ್ಕಲದಲ್ಲಿ ನಡೆದಿದೆ.
27 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವ. ಈತನ ತಾಯಿಗೆ ಜು. 20ರಂದು ಕೋವಿಡ್-19 ದೃಢಪಟ್ಟಿತ್ತು. ಸೋಂಕಿತರೆಂಬ ಕಾರಣಕ್ಕೆ ಜನರು ನೋಡುವ ರೀತಿ ಕುರಿತು ಯುವಕ ತೀವ್ರ ನೊಂದುಕೊಂಡಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.