ETV Bharat / state

ಗುರೂಜಿ ಒಳ್ಳೆಯವರಿದ್ದರು, ನನ್ನ ಗಂಡ ಕೊಲೆ ಮಾಡಿದ್ದೇಕೊ? ವನಜಾಕ್ಷಿ ಶಿರೂರ ಮಾತು - accused mahanthesha wife vanajakshi

ಕೊಲೆ ಪ್ರಕರಣ- ಚಂದ್ರಶೇಖರ ಗುರೂಜಿ ಬಗ್ಗೆ ಹಂತಕನ ಪತ್ನಿ ಕನಿಕರ- ಗಂಡನಿಗೆ ತಕ್ಕ ಶಾಸ್ತಿ ಆಗಲಿ ಎಂದು ಮಹಾಂತೇಶ ಶಿರೂರ ಪತ್ನಿ ಹೇಳಿಕೆ.

wife of accused mahanthesha reacts on chandrashekara murder case
ಕೊಲೆ ಆರೋಪಿ ಮಹಾಂತೇಶ ಶಿರೂರನ ಪತ್ನಿ ವನಜಾಕ್ಷಿ
author img

By

Published : Jul 6, 2022, 12:44 PM IST

Updated : Jul 6, 2022, 12:52 PM IST

ಹುಬ್ಬಳ್ಳಿ: ಮಂಗಳವಾರ ಭೀಕರವಾಗಿ ಹತ್ಯೆಗೀಡಾದ ಸರಳ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಬಹಳ‌ ಒಳ್ಳೆಯವರು. ಅವರನ್ನು ಕೊಲೆ ಮಾಡಿ ನನ್ನ ಗಂಡ ತಪ್ಪು ಮಾಡಿದ್ದಾರೆ. ಅವರಿಗೆ ಏನು ಶಿಕ್ಷೆ ಸಿಗುತ್ತದೋ ಅದನ್ನು ಅನುಭವಿಸಿ ಬರಲಿ. ಕೊಲೆಗೆ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಆರೋಪಿ ಮಹಾಂತೇಶ ಶಿರೂರ ಅವರ ಪತ್ನಿ ವನಜಾಕ್ಷಿ ಹೇಳಿದರು.

ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಮಗೂ ಗುರೂಜಿಗೂ ಯಾವುದೇ ಗಲಾಟೆ ಇರಲಿಲ್ಲ. ಅವರ ಅಪಾರ್ಟ್‌ಮೆಂಟ್ ನನ್ನ ಹೆಸರಿನಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್‌ನಲ್ಲಿ ಸಾಲ ಮಾಡಿ ಫ್ಲ್ಯಾಟ್ ಖರೀದಿ ಮಾಡಿದ್ದೇವೆ ಎಂದರು.

ಕೊಲೆ ಆರೋಪಿ ಮಹಾಂತೇಶ ಶಿರೂರನ ಪತ್ನಿ ವನಜಾಕ್ಷಿ

ನಾನು 2005ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದೆ. 2019ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ನನ್ನ ಪತಿ ಕೂಡಾ 2016ರಲ್ಲಿ ಕೆಲಸ ಬಿಟ್ಟಿದ್ದರು. ಏಕೆ ಬಿಟ್ಟರು ಎಂಬುದು ಗೊತ್ತಿಲ್ಲ. ಪತಿ ಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ವನಜಾಕ್ಷಿ ಹೇಳಿದರು.

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ: ಶವಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿಬ್ಬಂದಿ, ಸಂಬಂಧಿಕರು

ನಾಲ್ಕೈದು ದಿನಗಳಿಂದ ಪತಿ ಮನೆಗೆ ಬಂದಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ, ಕೆಲಸದಲ್ಲಿದ್ದೇನೆ ಎನ್ನುತ್ತಿದ್ದರು. ಆದರೆ ಮಂಗಳವಾರ ಟಿವಿಯಲ್ಲಿ ನೋಡಿದಾಗಲೇ ಅವರು ಗುರೂಜಿಯನ್ನು ಕೊಲೆ ಮಾಡಿರುವ ವಿಷಯ ಗೊತ್ತಾಯಿತು. ನಂತರ ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆಗೆ ಕರೆದಾಗ ಹೋಗಿ ನನಗೆ ಗೊತ್ತಿದ್ದನ್ನು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

Last Updated : Jul 6, 2022, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.