ಧಾರವಾಡ/ಹುಬ್ಬಳ್ಳಿ: ನಮ್ಮ ದೇಶದಲ್ಲಿ ರಾಹುಲ್ ಗಾಂಧಿ ಏನೇ ಮಾತನಾಡಿದ್ರೂ ಇಮ್ರಾನ್ ಖಾನ್ ಅದನ್ನೇ ದುರುಪಯೋಗಪಡಿಸಿಕೊಳ್ಳತಾ ಇದ್ದಾರೆ. ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಮಾಡಿ ನಾವು ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಹೇಳಿದರು.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಒಂದೇ ದೇಶ ಒಂದೇ ಸಂವಿಧಾನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಅದು ಸರಿಯಲ್ಲ ಅಂತಾರೆ. ಇದನ್ನೇ ಮುಂದಿಟ್ಟುಕೊಂಡು ಇಮ್ರಾನ್ ಖಾನ್ ಮಾತನಾಡ್ತಾ ಇದಾರೆ. ಹೀಗಾಗಿ ರಾಹುಲ್ ಗಾಂಧಿ ಹಿಂದೂಸ್ತಾನ್ ಪರವೋ ಪಾಕ್ ಪರವೋ ಅಂತಾ ನಾವೀಗ ವಿಚಾರ ಮಾಡಬೇಕಿದೆ ಎಂದು ಹರಿಹಾಯ್ದಿದ್ದಾರೆ.
![Anurag Takhur](https://etvbharatimages.akamaized.net/etvbharat/prod-images/4585184_vick.jpg)
ಮೂರುಸಾವಿರ ಮಠಕ್ಕೆ ಭೇಟಿ: ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದತಿಯ ಐತಿಹಾಸಿಕ ನಿರ್ಧಾರದ ಪರಿಣಾಮವಾಗಿ ಜಾರಿಯಾದ "ಒಂದು ದೇಶ-ಒಂದು ಸಂವಿಧಾನ"ದ ಜನ ಜಾಗೃತಿಯ ಗಣ್ಯರ ಭೇಟಿಯ ನಿಮಿತ್ತ ಕೇಂದ್ರ ಸಚಿವ ಅನುರಾಗ ಠಾಕೂರ್, ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದರು. ಪರಮ ಪೂಜ್ಯ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಚರ್ಚಿಸಿ ಪೂಜ್ಯರ ಆಶೀರ್ವಾದ ಪಡೆದರು