ETV Bharat / state

ಹುಬ್ಭಳ್ಳಿ - ವಿಜಯಪುರದ ಮಧ್ಯೆ ಸೋಮವಾರದಿಂದ ವೋಲ್ವೋ ಬಸ್ ಸೇವೆ ಆರಂಭ

ಹುಬ್ಭಳ್ಳಿ ಮತ್ತು ವಿಜಯಪುರದ ಮಧ್ಯೆ ಸೋಮವಾರದಿಂದ ವೋಲ್ವೋ ಬಸ್ ಸಾರಿಗೆ ಸೇವೆ ಆರಂಭವಾಗಲಿದೆ. ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬೆಳಗ್ಗೆ 06:30 ಬಸ್ ಸೇವೆ ಆರಂಭವಾಗಲಿದ್ದು, 300 ರೂ ಪ್ರಯಾಣದ ದರವನ್ನು ನಿಗದಿಪಡಿಸಲಾಗಿದೆ. ಸಾರಿಗೆಯು ನಿರ್ದಿಷ್ಟ ನಿಲುಗಡೆಯಿಂದ ಕೇವಲ 4 ಗಂಟೆಯಲ್ಲಿ ಹುಬ್ಬಳ್ಳಿಯಿಂದ ವಿಜಯಪುರ ತಲುಪುತ್ತದೆ.

author img

By

Published : Feb 12, 2022, 9:43 AM IST

Updated : Feb 12, 2022, 10:00 AM IST

hubballi to vijayapura multi axel bus service
ಹುಬ್ಭಳ್ಳಿ - ವಿಜಯಪುರದ ಮಧ್ಯೆ ಸೋಮವಾರದಿಂದ ವೋಲ್ವೋ ಬಸ್ ಸೇವೆ ಆರಂಭ

ಹುಬ್ಬಳ್ಳಿ: ಹುಬ್ಭಳ್ಳಿ ಮತ್ತು ವಿಜಯಪುರ ಮಧ್ಯೆ ಸೋಮವಾರದಿಂದ ವೋಲ್ವೋ ಬಸ್ ಸಾರಿಗೆ ಸೇವೆ ಆರಂಭವಾಗಲಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಾಗೂ ಹುಬ್ಭಳ್ಳಿ ಮತ್ತು ವಿಜಯಪುರ ನಗರಗಳ ನಡುವೆ ತ್ವರಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ.

ಸೀಮಿತ ನಿಲುಗಡೆಗಳೊಂದಿಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ, ಹುಬ್ಬಳ್ಳಿ ಮತ್ತು ವಿಜಯಪುರ ನಗರಗಳ ನಡುವೆ ಫೆಬ್ರವರಿ 14 ರಿಂದ ಇದೇ ಮೊದಲ ಬಾರಿಗೆ ವೋಲ್ವೋ ಮಲ್ಟಿ ಎಕ್ಸೆಲ್ ಸಾರಿಗೆ ಬಸ್ ಓಡಾಟ ನಡೆಸಲಿದೆ.

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬೆಳಗ್ಗೆ 06:30 ಬಸ್ ಸೇವೆ ಆರಂಭವಾಗಲಿದ್ದು, 300 ರೂ ಪ್ರಯಾಣದ ದರವನ್ನು ನಿಗದಿಪಡಿಸಲಾಗಿದೆ. ಬಸ್​​​​​​ ಗೋಕುಲ ರೋಡ್ ಬಸ್ ನಿಲ್ದಾಣದಿಂದ ಹೊರಟು, ಹೊಸೂರು ಬಸ್ ನಿಲ್ದಾಣದ ಮುಖಾಂತರ ವಿಜಯಪುರಕ್ಕೆ , ನವಲಗುಂದ, ನರಗುಂದ, ಕುಳಗೇರಿ ಕ್ರಾಸ್, ಗದ್ದನಕೇರಿ ಕ್ರಾಸ್, ಯು.ಕೆ.ಪಿ. (ಕೋಲಾರ) ಮಾರ್ಗವಾಗಿ ನಿರ್ದಿಷ್ಟ ನಿಲುಗಡೆಯೊಂದಿಗೆ ಸಂಚಾರ ನಡೆಸಲಿದೆ. ಸದರಿ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆಯು ಕೇವಲ 4 ಗಂಟೆಗಳಲ್ಲಿ ವಿಜಯಪುರ ತಲುಪುತ್ತದೆ.

ಇದನ್ನು ಓದಿ: ಹಾವೇರಿಯಲ್ಲಿ ಸೇತುವೆ ಮೇಲಿಂದ ಕೆಳಗೆ ಬಿದ್ದ ವಿಆರ್​ಎಲ್​ ಬಸ್​...ಇಬ್ಬರ ಸಾವು, 15 ಜನರಿಗೆ ಗಾಯ!

Last Updated : Feb 12, 2022, 10:00 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.