ETV Bharat / state

ಪಕ್ಷ ನನಗೆ ಕೊಟ್ಟ ‌ಜವಾಬ್ದಾರಿಯನ್ನು ನಿಭಾಯಿಸುತ್ತೇನೆ: ವಿಜಯ್​ ಸಂಕೇಶ್ವರ್ - ವಿಆರ್​​​​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ್

ರಾಜ್ಯಸಭೆ ಸದಸ್ಯತ್ವ ವಿಚಾರವಾಗಿ ವಿಆರ್​​​​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ್ ಮಾತನಾಡಿದ್ದು, ಪಕ್ಷ ಕೊಟ್ಟ ಜವಾಬ್ದಾರಿಯನ್ನ ಚಾಚೂ ತಪ್ಪದೆ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

Vijay Sangeshwar statment
ವಿಆರ್​​​​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ್ ಸುದ್ದಿಗೋಷ್ಠಿ
author img

By

Published : Jun 5, 2020, 3:32 PM IST

ಹುಬ್ಬಳ್ಳಿ: ನಾನು ಭಾರತೀಯ ಜನತಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ನನಗೆ ಏನು ಆದೇಶ ಬರುತ್ತೋ ಅದನ್ನು ಪಾಲಿಸುತ್ತೇನೆ ಎಂದು ವಿಆರ್​​​​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಿಯೂ ಅಲ್ಲ, ಇದು ರಾಜಕೀಯ ವೇದಿಕೆಯೂ ಅಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ಚಾಚೂ ತಪ್ಪದೆ ನಿಭಾಯಿಸುತ್ತೇನೆ ಎಂದು ರಾಜ್ಯಸಭೆ ಸದಸ್ಯತ್ವ ವಿಚಾರವಾಗಿ ಪ್ರತಿಕ್ರಿಯಿಸಿದರು.

ನಮ್ಮ ಬಸ್​​​​​ಗಳಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡುತ್ತಿದ್ದೇವೆ. ಸರ್ಕಾರದ ಎಲ್ಲಾ ನಿಯಮವನ್ನು ಪಾಲಿಸುತ್ತೇವೆ. ಸರ್ಕಾರಿ ಬಸ್​​​ಗಳು ಎಲ್ಲಾ ನಿಯಮವನ್ನು ಗಾಳಿಗೆ ತೂರುತ್ತಿವೆ ಎಂದರು. ನಾವು ಕೇವಲ 20 ಸೀಟ್​​​​ಗಳನ್ನು ಹಾಕುತ್ತಿದ್ದೇವೆ. ನಮ್ಮ 400 ಬಸ್​​​​ಗಳಲ್ಲಿ ಕೇವಲ 25 ಬಸ್​​ಗಳು ಕಾರ್ಯ ನಿರ್ವಹಿಸುತ್ತಿವೆ. ಜನರಲ್ಲಿ ಭಯವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಯೇ ನಮ್ಮ ಹೊಣೆ ಎಂದು ಹೇಳಿದರು.

ವಿಆರ್​​​​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ್

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮವಾದ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನಿಭಾಯಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.