ಹುಬ್ಬಳ್ಳಿ: ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.
ಫುಡ್ ಇನ್ಸ್ಪೆಕ್ಟರ್ ಎ ಎ ಕತಿಬ್ (48), ಇವರ ಮಗ ಸಯ್ಯದ್ ಮಹಮ್ಮದ್ ಅದ್ನಾನ್ (20) ಹಲ್ಲೆಗೊಳಗಾದವರು. ಇವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ನಿನ್ನೆ ಅಂಗಡಿಗೆ ಬಂದ ಫಸಲ್ ಪುಣೆವಾಲೆ, ಮೋಸಿನ್ ಥಾಸ್ ವಾಲೆ ಎಂಬುವರು ಪಂಚರ್ ತೆಗೆದು ಕೊಡುವಂತೆ ಕೇಳಿದ್ದಾರೆ. ಆದರೆ, ಇಂದು ಅಂಗಡಿಗೆ ರಜೆ ಇದೆ. ಪಂಚರ್ ತೆಗೆಯುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಅವರಿಬ್ಬರು, ಐದಾರು ಜನರನ್ನು ಕರೆದು ಸಯ್ಯದ್ ಮತ್ತು ಆತನ ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಯಲ್ಲಿ ಸಯ್ಯದ್ ಮುಖ ಹಾಗೂ ಎಡ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಕತಿಬ್ ಬೆನ್ನಿಗೆ, ಕೈ ಬೆರಳುಗಳು, ತಲೆಗೆ ಗಂಭೀರ ಗಾಯವಾಗಿವೆ. ಗಾಯಾಳುಗಳನ್ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.