ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೊಬ್ಬ ಕುಳಿತಲ್ಲೆ ಸಾವನಪ್ಪಿರುವ ಘಟನೆ ಕೇಶ್ವಾಪುರದ ನೈರುತ್ಯ ರೈಲ್ವೆ ಆಫೀಸ್ ಹತ್ತಿರ ನಡೆದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕೇಶ್ವಾಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವ್ಯಕ್ತಿಯ ಗುರುತು ಕೂಡಾ ಪತ್ತೆಯಾಗಿಲ್ಲ, ಸಾವನ್ನಪ್ಪಿದ ವ್ಯಕ್ತಿ ಭಿಕ್ಷುಕ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇದ್ದವರು ಕೇಶ್ವಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸುಬಹುದು ಎಂದು ಪೊಲೀಸರು ತಿಳಿಸಿದ್ದಾರೆ.